ಬೆಂಗಳೂರು:ಈಶಾನ್ಯ ರಾಜ್ಯದಿಂದ ಬಂದಿರುವ ಅಸ್ಸಾಂನ ಬಹಳಷ್ಟು ಜನರು ಚೀನಾದವರ ರೀತಿ ಇರುವ ಕಾರಣ, ಅವರನ್ನು ಕೆಲಕಿಡಿಗೇಡಿಗಳು ನೀವು ಚೀನಾದವರು ಇದ್ದ ಹಾಗೆ ಇದ್ದೀರಾ. ನಿಮ್ಮಿಂದ ನಮಗೆ ಕೊರೊನಾ ಬರುತ್ತೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ.
ಅಸ್ಸಾಮಿಗಳನ್ನು ಚೀನೀಯರೆಂದು ಭಾವಿಸಿ ನಿಂದನೆ... ಈಶಾನ್ಯ ನಾಡಿನವರಿಗೆ ಅಭಯ ನೀಡಿದ ಭಾಸ್ಕರ್ ರಾವ್ - ಕೊರೊನಾ ಸುದ್ದಿ
ಬೆಂಗಳೂರಿನಲ್ಲಿದ್ದ ಈಶಾನ್ಯ ರಾಜ್ಯಗಳ ಜನರು ಚೀನಾದವರಂತೆ ಕಾಣುವುದರಿಂದ ಕೆಲವು ಕಿಡಿಗೇಡಿಗಳು ಅವರ ಮೇಲೆ ಹಲವು ಆರೋಪಗಳನ್ನು ಮಾಡುತ್ತಿದ್ದರು. ಇದನ್ನು ಮನಗಂಡ ನಗರ ಪೊಲೀಸ್ ಆಯುಕ್ತರು, ಈ ರೀತಿ ಆರೋಪಗಳನ್ನು ಮಾಡಿದ್ರೆ, ನೀವು ಪೊಲೀಸರ ಸಹಾಯ ಪಡೆಯಿರಿ ಎಂದು ಹೇಳುವ ಮೂಲಕ ಅಭಯ ನೀಡಿದ್ದಾರೆ.
ಈ ವಿಚಾರ ತಿಳಿದ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ನಿಮ್ಮ ಜೊತೆ ನಾವಿದ್ದೇವೆ. ನೀವು ನನ್ನ ಅಣ್ಣ ತಮ್ಮಂದಿರಿದ್ದಂತೆ. ನೀವು ಹೆದರಬೇಡಿ ನಿಮಗೆ ಯಾರಾದ್ರು ಹೀಯಾಳಿಸಿದ್ರೆ, ಸ್ಥಳೀಯ ಪೊಲೀಸ್ ಠಾಣೆಯ ಸಹಾಯ ಪಡೆಯಿರಿ. ಅಥವಾ ನೀವೆ ನನಗೆ ಕರೆ ಮಾಡಬಹುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಸ್ಸಾಂನ ಬಹಳಷ್ಟು ಜನರು ಹೋಟೆಲ್ಗಳಲ್ಲಿ ಮತ್ತು ವಾಚ್ ಮ್ಯಾನ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಚೀನಾದಿಂದ ಬಂದಿದೆ ಎಂಬುದು ಎಲ್ಲರ ನಂಬಿಕೆಯಾಗಿದೆ. ಹಾಗಾಗಿ ಇವರು ನೋಡಲು ಸ್ವಲ್ಪ ಚೀನಿಯರ ರೀತಿ ಕಾಣುವುದರಿಂದ ಈ ರೀತಿ ಆರೋಪಗಳನ್ನ ಎದುರಿಸಬೇಕಾಗಿದೆ.