ಕರ್ನಾಟಕ

karnataka

ETV Bharat / state

ಕ್ಯಾಬ್​ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ: ಪ್ರಶಂಸನಾ ಪತ್ರ ನೀಡಿ ಗೌರವಿಸಿದ ಪೊಲೀಸ್ ಆಯುಕ್ತರು - The city police commissioner appreciated the driver's honesty and honored him.

ನ್ಯೂಜಿಲ್ಯಾಂಡ್​ ಪ್ರಜೆಯೊಬ್ಬರು ಕ್ಯಾಬ್​ನಲ್ಲಿ ಬಿಟ್ಟು ಹೋಗಿದ್ದ ಪರ್ಸ್​ನ್ನ ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದ ಚಾಲಕನಿಗೆ  ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಚಾಲಕನ ಪ್ರಾಮಾಣಿಕತೆ ಮೆಚ್ಚಿ, ಪ್ರಶಂಸನಾ ಪತ್ರ ನೀಡಿ ಗೌರವಿಸಿದ ನಗರ ಪೊಲೀಸ್ ಆಯುಕ್ತ..

By

Published : Aug 17, 2019, 3:18 AM IST

ಬೆಂಗಳೂರು: ನ್ಯೂಜಿಲ್ಯಾಂಡ್​ ಪ್ರಜೆಯೊಬ್ಬರು ಕ್ಯಾಬ್​ನಲ್ಲಿ ಬಿಟ್ಟು ಹೋಗಿದ್ದ ಪರ್ಸ್​ನ್ನ ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿದ ಚಾಲಕನಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಕ್ಯಾಬ್ ‍ಚಾಲಕರಾದ ಸಿ.ಆರ್.ವಿಶ್ವನಾಥ್ ಅವರ ಶಿಫ್ಟ್ ಡಿಸೈರ್ ಕಾರಿನಲ್ಲಿ ‌ಇದೇ ತಿಂಗಳ 14ರಂದು ಮಧ್ಯಾಹ್ನ 12ಗಂಟೆಯ ವೇಳೆ ನ್ಯೂಜಿಲ್ಯಾಂಡ್ ಪ್ರಜೆ ಕ್ವೆಲಿನ್ ಜಾನ್ ಆಸ್ಬಿ ಕಿಂಗ್ ಎಂಬುವರು ಹೊರಮಾವುವಿನಲ್ಲಿ ಹತ್ತಿ, ಬೆಳ್ಳಂದೂರಿನಲ್ಲಿ ಇಳಿದು ಹೋಗುವಾಗ ಕಾರಿನಲ್ಲೇ ಪರ್ಸ್ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಚಾಲಕ ಹಿಂದೆ ತಿರುಗಿ ನೋಡಿದಾಗ ಪರ್ಸ್ ಬಿಟ್ಟು ಹೋಗಿರುವುದು ಗೊತ್ತಾಗಿದೆ.

ಪರ್ಸ್​ನಲ್ಲಿ 140 ಯುಎಸ್ ಡಾಲರ್, 400 ದುಬಾಯ್ ಡ್ಯೂರೋ, 2 ರೋಮನ್ ಕರೆನ್ಸಿ, 10 ಡಾಲರ್ ಸಿಂಗಾಪೂರ್ ಕರೆನ್ಸಿ ಹಾಗೂ 640 ರೂ ಇಂಡಿಯನ್ ಮನಿ, 3 ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್, ಆಧಾರ್ ಕಾರ್ಡ್, ನ್ಯೂಜಿಲ್ಯಾಂಡ್ ದೇಶದ ಡ್ರೈವಿಂಗ್ ಲೈಸೆನ್ಸ್, ಪಾನ್​ಕಾರ್ಡ್ ಹಾಗೂ ಇನ್ನಿತರೆ ದಾಖಲಾತಿಗಳಿದ್ದು, ಈ ಪರ್ಸ್​ನ್ನ ಚಾಲಕ ಸಿ.ಆರ್.ವಿಶ್ವನಾಥ್ ಪೊಲೀಸರಿಗೆ ಒಪ್ಪಿಸಿದ್ರು. ಇವರ ಪ್ರಾಮಾಣಿಕತೆ ಶ್ಲಾಘಿಸಿ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ABOUT THE AUTHOR

...view details