ಕರ್ನಾಟಕ

karnataka

ETV Bharat / state

ಪೊಲೀಸ್ ಠಾಣೆಗಳಿಗೆ ಆಯುಕ್ತರಿಂದ ಮುನ್ನೆಚ್ಚರಿಕಾ ಕ್ರಮಗಳ ಸುತ್ತೋಲೆ - city commissioner issued a notice to the stations

ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಠಾಣೆಗೆ ಭೇಟಿ ನೀಡುವ ಸಾರ್ವಜನಿಕರು ಕೂಡಾ ಕೊರೊನಾ ವೈರಸ್ ಬಗ್ಗೆ ಜಾಗೃತಿ ವಹಿಸಲು ನಗರ ಆಯುಕ್ತ ಭಾಸ್ಕರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ.

The city commissioner issued a notice to the stations
ಕೊರೊನಾ ಭೀತಿ ಹಿನ್ನೆಲೆ ಠಾಣೆಗಳಿಗೆ ಕೆಲ ಸೂಚನೆ ಹೊರಡಿಸಿದ ನಗರ ಆಯುಕ್ತ

By

Published : Mar 15, 2020, 2:02 PM IST

ಬೆಂಗಳೂರು:ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಠಾಣೆಗೆ ಭೇಟಿ ನೀಡುವ ಸಾರ್ವಜನಿಕರು ಕೂಡಾ ಕೊರೊನಾ ವೈರಸ್ ಬಗ್ಗೆ ಜಾಗೃತಿ ವಹಿಸಲು ನಗರ ಆಯುಕ್ತ ಭಾಸ್ಕರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ.

ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಸಮಾಜದ ಸೇವೆಗೆ ನಿಯೋಜನೆಯಾಗಿರುವ ಪೊಲೀಸರು ಕೂಡಾ ಮಾರಕ ರೋಗ ಹರಡುವ ಕಾರಣ ಸಾಕಷ್ಟು ಮುನ್ನೆಚ್ಚರಿಕೆಯಿಂದ ಇರಬೇಕೆಂದು ನಗರ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ:

* ಕೊರೊನಾ ವೈರಸ್ ಟೋಲ್ ಫ್ರೀ ನಂಬರ್:104

* ಚೀತಾ, ಹೊಯ್ಸಳ ವಾಹನಗಳಲ್ಲಿ ಹ್ಯಾಂಡ್ ಕ್ಲೀನರ್

* ಠಾಣೆಯ ಎಲ್ಲಾ ಸಿಬ್ಬಂದಿಗಳು ಆಗಾಗ ಕೈ ತೊಳೆಯುವುದು

* ಪೊಲೀಸ್ ಸಿಬ್ಬಂದಿಗಳಲ್ಲಿ ವೈರಸ್ ಕಂಡ ಕೂಡಲೇ ರಜೆ ತೆಗೆದುಕೊಳ್ಳುವುದು

* ಠಾಣೆಗೆ ಯಾವುದೇ ವ್ಯಕ್ತಿ ಭೇಟಿ ನೀಡಿದಾಗ ಮೂರು ಅಡಿ ದೂರದಲ್ಲಿ ನಿಂತು ಮಾತಾಡುವುದು

* ಎಲ್ಲಾ ಚೀತಾ, ಹೊಯ್ಸಳ ವಾಹನದಲ್ಲಿ ಮಾಸ್ಕ್ ಇಟ್ಟುಕೊಳ್ಳುವುದು

* ಹೊಯ್ಸಳ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಬಗ್ಗೆ ದೂರು ಬಂದರೆ ‌104ಗೆ ಕರೆ ಮಾಡಲು ತಿಳಿಸಿ ನಂತರ ಆಂಬುಲೆನ್ಸ್​ನಲ್ಲಿ ಕರೆದುಕೊಂಡು ಹೋಗಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ.

ABOUT THE AUTHOR

...view details