ಬೆಂಗಳೂರು:ಜನರು ಸೇದಿ ಬಿಸಾಡುವ ಸಿಗರೇಟ್ ಮಾದರಿಯನ್ನು ಸಿ.ಎಫ್ ಟಿ.ಆರ್. ಐ. ಲ್ಯಾಬ್ಗೆ ಕಳಿಸಿ ವರದಿಯನ್ನು ತರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮನವಿ ಮಾಡಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಸಚಿನ್ ಮಿಗಾ, ರಾಜ್ಯ ಸರ್ಕಾರ ಸಿಗರೇಟ್ ಲಾಬಿಗೆ ಮಣಿದಿದೆ. ಜನರು ಸೇದಿ ಬಿಸಾಡುವ ಸಿಗರೇಟ್ ಸಿ. ಎಫ್. ಟಿ.ಆರ್. ಐ. ಲ್ಯಾಬ್ಗೆ ಕಳಿಸಿ ವರದಿಯನ್ನು ತರಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ. ಕೂಡಲೆ ಕೇಂದ್ರ ಸರ್ಕಾರ ಸಿಗರೇಟ್ ನಿಷೇಧಿಸುವಂತೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿಗೆ ಪತ್ರ ಬರೆದ ಸಚಿನ್ ಮೀಗಾ ಸಚಿನ್ ಮೀಗಾ ತಾವು ಬರೆದ ಪತ್ರದಲ್ಲಿ ವಿಸ್ತೃತವಾಗಿ ವಿವರಣೆ ನೀಡಿದ್ದು, ಸಿಗರೇಟ್ ಕಂಪನಿ ಲಾಬಿಗೆ ತಮ್ಮ ಸರ್ಕಾರ ಮಣಿದ ವಿಚಾರದ ಬಗ್ಗೆ ಲಾಕ್‌ಡೌನ್ 2.0: ಕುಡಿತ ಮತ್ತು ತಂಬಾಕು ಮಾರಾಟವನ್ನು ತಮ್ಮ ನೇತೃತ್ವದ ಸರ್ಕಾರ ನಿಷೇಧಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಜಾರಿಗೊಳಿಸಬಹುದಾದ ನಿಯಮದಡಿ ಬುಧವಾರ ಬಿಡುಗಡೆಯಾದ ನಿರ್ದೇಶನಗಳ ಪಟ್ಟಿಯಲ್ಲಿ, ಮದ್ಯ, ತಂಬಾಕು ಮತ್ತು ಗುಟ್ಕಾ ಮಾರಾಟವನ್ನು ತಮ್ಮ ಸರ್ಕಾರ ನಿಷೇಧಿಸಿತು.
ಈ ಹಿಂದಿನಿಂದಲೂ ಅಡಿಕೆ ಆರೋಗ್ಯಕ್ಕೆ ಹಾನಿಕರ ಅದನ್ನು ತಿನ್ನುವುದನ್ನು ನಿಷೇಧಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗರೇಟ್ ಕಂಪನಿಗಳು ಸರ್ಕಾರದ ಮುಖಾಂತರ ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸಿವೆ ಎಂದಿದ್ದಾರೆ.
ಗುಟ್ಕಾ ನಿಷೇಧವಾದರೆ ಜನರು ಸಿಗರೇಟ್ ಸೇವನೆಯಿಂದ ಸಿಗರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ಲಾಭವಾಗಲಿದ್ದು, ಸರ್ಕಾರ ಈ ಕಾಣದ ಕೈಗಳ ಲಾಬಿಗೆ ಮಣಿದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದ ಲಕ್ಷಾಂತರ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಹಾಗೂ ಸಿಗರೇಟ್ ಬಾಯಲ್ಲಿ ಇಟ್ಟು ಸೇದುವುದರಿಂದ ಅದಕ್ಕೆ ಎಂಜಲು ಅಂಟಿರುತ್ತದೆ. ಸಿಗರೇಟ್ ಸೇದ ಮೇಲೆ ಜನರು ಗುಟ್ಕಾ ರೀತಿ ಅಲ್ಲಿ ಇಲ್ಲಿ ಬೀಸಾಡುತ್ತಾರೆ ಇದರಿಂದ ಸಹ ಕೊರೊನ ಹರಡುತ್ತದೆ ಸಿಗರೇಟ್ ಏಕೆ ಸರ್ಕಾರ ಬ್ಯಾನ್ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ. ಪತ್ರದ ಒಂದು ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದಾರೆ.