ಬೆಂಗಳೂರು:ಕೇಂದ್ರದ 2020-21ನೇ ಸಾಲಿನ ಬಜೆಟ್ ನಿರಾಶಾದಾಯಕವಾಗಿದ್ದು, ಶೇ. 50ರಷ್ಟು ಮಾತ್ರ ಜನಪರವಾಗಿರುವ ಬಡವರ ವಿರೋಧಿ ಬಜೆಟ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.
ಕೇಂದ್ರದ ಬಜೆಟ್ ಬಡವರ ವಿರೋಧಿಯಾಗಿದೆ: ಖಂಡ್ರೆ ಟೀಕೆ
ಕೇಂದ್ರದ 2020-21ನೇ ಸಾಲಿನ ಬಜೆಟ್ ನಿರಾಶಾದಾಯಕವಾಗಿದ್ದು, ಶೇ. 50ರಷ್ಟು ಮಾತ್ರ ಜನಪರವಾಗಿರುವ ಬಡವರ ವಿರೋಧಿ ಬಜೆಟ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಖಂಡ್ರೆ, ದೇಶದ ಜ್ವಲಂತ ಸಮಸ್ಯೆಗಳಾದ ಜಿಡಿಪಿ ಕುಸಿತ, ಆರ್ಥಿಕ ಕುಸಿತ, ನಿರುದ್ಯೋಗ ಈ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರದಲ್ಲಿ ಯೋಜನೆ ಘೋಷಿಸಿಲ್ಲ. ರೈತರಿಗೆ ಮಾರುಕಟ್ಟೆಯಲ್ಲಿ ಖಚಿತ ಬೆಲೆ ನೀಡಲಿಲ್ಲ. ರೈತರ ಆದಾಯ ಹೆಚ್ಚಿಸುವ ಯೋಜನೆಯಿಲ್ಲ. ಏರ್ ಇಂಡಿಯಾ ಸಂಸ್ಥೆ ಮಾರಾಟಕ್ಕಿಟ್ಟು ಕಿಸಾನ್ ಉಡಾನ್ ಹೇಗೆ ಮಾಡುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.
ಕಳೆದ ಇಪ್ಪತ್ತು ವರ್ಷಗಳಲ್ಲಿ ಜಿಡಿಪಿ ಭಾರೀ ಕೆಳಮಟ್ಟಕ್ಕೆ ಕುಸಿದಿದೆ. ವಿತ್ತೀಯ ಕೊರತೆ 3.8 ಆಗಿದೆ. ನಿಜವಾಗಿಯೂ ವಿತ್ತೀಯ ಕೊರತೆ ಜಿಡಿಪಿಗಿಂತಲೂ ಹೆಚ್ಚಿದೆ. 500 ಪಾಯಿಂಟ್ ಸೆನ್ಸೆಕ್ಸ್ ಕುಸಿದಿದೆ. ಇವೆಲ್ಲವನ್ನು ಗಮನಿಸಿದರೆ ಇದು ನಿರಾಶಾದಾಯಕ ಬಜೆಟ್ ಎಂದು ಬೇಸರ ವ್ಯಕ್ತಪಡಿಸಿದರು.