ಕರ್ನಾಟಕ

karnataka

ETV Bharat / state

ಕಾವೇರಿ ವೆಬ್​ಸೈಟ್ ಪ್ರಕರಣ: ಎರಡನೇ ಬಾರಿಗೆ ಪತ್ರ ಬರೆದ ಸಿಸಿಬಿ ಪೊಲೀಸರು ​ - The Cauvery Web Site news

ಕಾವೇರಿ ವೆಬ್​​ಸೈಟ್ ತಿರುಚಿದ ಪ್ರಕರಣ ಸಂಬಂಧ ತನಿಖಾ ದೃಷ್ಟಿಯಿಂದ ಅಗತ್ಯ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಎರಡನೇ ಬಾರಿ ಮುದ್ರಾಂಕ ಇಲಾಖೆಯ ಆಯುಕ್ತ ಡಾ. ಕೆ.ವಿ.ತ್ರಿಲೋಕ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ಸಿಸಿಬಿ ಪೊಲೀಸ್​

By

Published : Nov 10, 2019, 9:00 AM IST

ಬೆಂಗಳೂರು: ಕಾವೇರಿ ವೆಬ್​ಸೈಟ್ ತಿರುಚಿದ ಪ್ರಕರಣ ಸಂಬಂಧ ತನಿಖಾ ದೃಷ್ಟಿಯಿಂದ ಅಗತ್ಯ ಮಾಹಿತಿ ಕೋರಿ ಸಿಸಿಬಿ ಪೊಲೀಸರು ಎರಡನೇ ಬಾರಿ ಮುದ್ರಾಂಕ ಇಲಾಖೆಯ ಆಯುಕ್ತ ಡಾ. ಕೆ.ವಿ.ತ್ರಿಲೋಕ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ಆಯುಕ್ತರ ಮೇಲೆ ಸಬ್ ರಿಜಿಸ್ಟ್ರಾರ್​ಗಳು ಒತ್ತಡ ಹೇರುತ್ತಿದ್ದಾರಾ? ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಯಾಕೆಂದರೆ ತನಿಖಾ ಮಾಹಿತಿ ಕೋರಿ ಪತ್ರ ಬರೆದರೂ ಈವರೆಗೂ ಯಾವುದೇ ಮಾಹಿತಿ ನೀಡದೆ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್​ಗಳು ಒತ್ತಡ ಹೇರಿದ್ದಾರಾ ಎಂಬ ಗುಮಾನಿ ಆರಂಭವಾಗಿದೆ.

ಪ್ರಕರಣ ಸಂಬಂಧ ಬಿಲ್ಡರ್ ಸೋಮಣ್ಣ ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ವಿಚಾರಣೆ ಚುರುಕುಗೊಳಿಸಿದ್ದಾರೆ. ದಾಸನಪುರ ಹಾಗೂ ಲಗ್ಗೆರೆಯ ಉಪ‌ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ರೈತರ ಜಮೀನುಗಳನ್ನು ರೆವಿನ್ಯೂ ಸೈಟ್​ಗಳಾಗಿ ಪರಿವರ್ತಿಸಿ, ಸೂಕ್ತ ಬೆಲೆ ನೀಡುವುದಾಗಿ ಹೇಳಿ ವಂಚಿಸುತ್ತಿದ್ದನಂತೆ. ಜೊತೆಗೆ ಭೂ ಖರೀದಿಗಾರರಿಗೆ ರೆವಿನ್ಯೂ ಸೈಟ್ ಎಂದು ಹೇಳಿಕೊಂಡು ಮಾರಾಟ ಮಾಡುತ್ತಿದ್ದ. ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ದಿನ 40 ಸೈಟ್​​ಗಳನ್ನು ರಿಜಿಸ್ಟ್ರಾರ್ ಮಾಡಿಸಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details