ಕರ್ನಾಟಕ

karnataka

ETV Bharat / state

'ನಮ್ಮ ಮೆಟ್ರೋ' ಮೇಲ್ಛಾವಣಿ ಕುಸಿತ; ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು! - ಬಸವನಗುಡಿ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನ್

ಮೆಟ್ರೋ ಸ್ಟೇಷನ್​ನಲ್ಲಿನ ಮೇಲ್ಛಾವಣಿಯಿಂದ ಇಟ್ಟಿಗೆ ಹಾಗೂ ಕಲ್ಲುಗಳು ಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ನಮ್ಮ ಮೆಟ್ರೋ ಮೇಲ್ಛಾವಣಿ ಕುಸಿತ

By

Published : Oct 5, 2019, 6:25 PM IST

ಬೆಂಗಳೂರು:ಮೆಟ್ರೋ ಸ್ಟೇಷನ್‌ನಲ್ಲಿ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದ ಪರಿಣಾಮ ಇಟ್ಟಿಗೆ ಹಾಗೂ ಕಲ್ಲು ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಬಚಾವ್​ ಆಗಿದ್ದಾರೆ.

ಬಸವನಗುಡಿ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನ್​ನಲ್ಲಿ ಈ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಸೋಮವಾರ ಅಂದರೆ ಸೆಪ್ಟೆಂಬರ್ 30 ರಂದು ಸಂಜೆ 6 ಗಂಟೆ ಸುಮಾರಿಗೆ ಮೇಲ್ಛಾವಣಿ ಕುಸಿದು, ಇಟ್ಟಿಗೆ , ಕಲ್ಲು ಮೇಲಿಂದ ಬಿದ್ದ ಪರಿಣಾಮ, ಟಿಕೆಟ್ ಕಾಯಿನ್ ಹಾಕುವ ಟೇಬಲ್ ಹೊಡೆದು ಹೋಗಿದೆ. ಕ್ಷಣಮಾತ್ರದಲ್ಲಿ ಮೂವರು ಮುಂದೆ ಸಾಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ನಮ್ಮ ಮೆಟ್ರೋ ಮೇಲ್ಛಾವಣಿ ಕುಸಿತ

ಈ ಮೆಟ್ರೋ ಅವಘಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಟ್ರೋ ಕಳಪೆ ಕಾಮಗಾರಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಪ್ರಯಾಣ ಎಷ್ಟು ಸೇಫ್ ಅನ್ನೋ ಪ್ರಶ್ನೆ‌ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ABOUT THE AUTHOR

...view details