ಬೆಂಗಳೂರು:ತಾಯಿ ಬೈದಿದ್ದಕ್ಕೆ ಅಸಮಾಧಾನಗೊಂಡ ಮಗ, ಮನೆ ಬಿಟ್ಟು ಹೋಗಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೋಳೂರುಪಾಳ್ಯದಲ್ಲಿ ನಡೆದಿದೆ.
ತಾಯಿ ಬೈದು ಬುದ್ದಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಬೆಂಗಳೂರಿನ ಬಾಲಕ! - ಅಮ್ಮ ಬೈದಿದ್ದಕ್ಕೆ ಮನೆ ಬಿಟ್ಟ ಬಾಲಕ
ಬೈಕ್ನಿಂದ ಬಿದ್ದು ಗಾಯಗೊಂಡಿದ್ದ ಮಗನಿಗೆ ಬುದ್ದಿ ಹೇಳಿದ್ದಕ್ಕೆ ಅಸಮಾಧಾನಗೊಂಡ ಮಗ ಮನೆ ಬಿಟ್ಟು ತೆರಳಿದ್ದಾನೆ.

ಬುದ್ದಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ
16 ವರ್ಷದ ಗಗನ್ ಮನೆ ಬಿಟ್ಟು ಹೋಗಿರುವ ಬಾಲಕ. 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗಗನ್, ಇದೇ ತಿಂಗಳ 9ರಂದು ಬೈಕ್ನಲ್ಲಿ ಹೋಗುವಾಗ ಬಿದ್ದು ಗಾಯಗೊಂಡಿದ್ದ. ಇದಕ್ಕೆ ಆಕೆಯ ತಾಯಿ ಬೈದು ಬುದ್ದಿ ಹೇಳಿದ್ದಾರೆ. ಇಷ್ಟಕ್ಕೆ ಅಸಮಾನಧಾನಗೊಂಡ ಗಗನ್, ಅದೇ ದಿನ ಕಸ ಹಾಕಿ ಬರುವುದಾಗಿ ಹೇಳಿ ಹೋದವನು ಈವರೆಗೂ ಮನೆಗೆ ಬಂದಿಲ್ಲ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.