ಬೆಂಗಳೂರು:ವಿಪಕ್ಷಗಳ ಅಧಿಕಾರ ಮೊಟಕು ಮಾಡುವುದು, ನಾವು ಹೇಳಿದ್ದೇ ಆಗಬೇಕೆಂಬ ಅಹಂಕಾರ ಅವರದ್ದು ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಗುಂಡೂರಾವ್, ಬಿಜೆಪಿಯವರು ಅಹಂಕಾರದಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ಅಧಿವೇಶನ ಕೇವಲ ಮೂರು ದಿನ ಯಾಕೆ ಕರೆದಿದ್ದು. ಪ್ರವಾಹ, ಬರದ ಜೊತೆಗೆ ನೂರೆಂಟು ಸಮಸ್ಯೆ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಸರ್ಕಾರದ ನಡೆ ಬೇಸರ ತರಿಸುತ್ತಿದೆಯೆಂದು ಅಸಮಧಾನ ಹೊರಹಾಕಿದರು.
ಪರಂ ಮನೆ ಮೇಲೆ ಐಟಿ ದಾಳಿ ರಿವೇಂಜ್ ಪಾಲಿಟಿಕ್ಸ್: ದಿನೇಶ್ ಗುಂಡೂರಾವ್ ಆರೋಪ ಇನ್ನೂ ಪರಮೇಶ್ವರ್ ಮೇಲೆ ಐಟಿ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರ ಕನ್ನಡ ಅಧೀನದ ಏಜೆನ್ಸಿಯನ್ನ ಬಳಸಿಕೊಂಡು ದಾಳಿ ಮಾಡಿಸಿದೆ. ಪ್ರತಿಪಕ್ಷ ಮುಗಿಸುವ ಕೆಲಸ ನಡೆಯುತ್ತಿದ್ದು, ಜನ ಇದನ್ನ ಯಾವತ್ತೂ ಒಪ್ಪುವುದಿಲ್ಲವೆಂದರು.
ಬಿಜೆಪಿಯಲ್ಲಿ ಎಷ್ಟು ಭ್ರಷ್ಟರಿದ್ದಾರೆ. ಅವರ ಮಂತ್ರಿಗಳ ಮೇಲೆ ಸಾಕಷ್ಟು ಆರೋಪಗಳಿವೆ, ಆದರೂ ರಿವೇಂಜ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಇನ್ನೂ ದೇಶದ ಅರ್ಥವ್ಯವಸ್ಥೆ 5.8 ಪ್ರತಿಶತಕ್ಕೆ ಕುಸಿದಿದೆ. ಸುಳ್ಳು ವದಂತಿ ಹಬ್ಬಿಸಿ ಸರ್ಕಾರ ನಡೆಸುತ್ತಿದ್ದು, ಪ್ರತಿಪಕ್ಷ ನಾಯಕರನ್ನ ಟಾರ್ಗೆಟ್ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.