ಕರ್ನಾಟಕ

karnataka

ETV Bharat / state

ಸರ್ಕಾರ ರಚನೆಗೆ ಬಿಜೆಪಿ ಸಿದ್ಧವಿದೆ: ಶಾಸಕ ಬಿ. ಶ್ರೀರಾಮುಲು - ಡಿ.ಕೆ ಶಿವಕುಮಾರ್

ಕಾಂಗ್ರೆಸ್​ ಟ್ರಬಲ್​ ಶೂಟರ್​ ಡಿ.ಕೆ ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ. ಅವರು ದುಖಾನ್ ಬಂದ್ ಮಾಡಬೇಕು. ಈ ರೀತಿ ಡ್ರಾಮಾ ಮಾಡುವ ಅಗತ್ಯವಿಲ್ಲ. ಸಂಖ್ಯಾಬಲವಿಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಶಾಸಕ ಶ್ರೀರಾಮುಲು ಗುಡುಗಿದ್ದಾರೆ. ಅಲ್ಲದೆ, ಬಿಜೆಪಿ ಸರ್ಕಾರ ರಚನೆಗೆ ಸಿದ್ಧವಿದೆ ಎಂದು ಹೇಳಿದ್ದಾರೆ.

ಶಾಸಕ ಬಿ.ಶ್ರೀರಾಮುಲು

By

Published : Jul 10, 2019, 2:55 PM IST

ಬೆಂಗಳೂರು:ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ನೂರಕ್ಕೆ ನೂರರಷ್ಟು ಸರ್ಕಾರ ರಚನೆ ಮಾಡಲು ಬಿಜೆಪಿ ಸಿದ್ಧವಿದೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಸಂವಿಧಾನವನ್ನು ಕಾಪಾಡುವ ಕೆಲಸ ಮಾಡಬೇಕು. ಶಾಸಕರು ರಾಜೀನಾಮೆ ಕೊಟ್ಟಾಗ ಅದನ್ನು ಸ್ವೀಕರಿಸಬೇಕು ಎಂದರು.

ಶಾಸಕ ಬಿ.ಶ್ರೀರಾಮುಲು

ಸ್ಪೀಕರ್ ಸ್ಥಾನದ ಗೌರವವನ್ನು ರಮೇಶ್ ಕುಮಾರ್​ ಕಾಪಾಡಬೇಕು. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದು ಶ್ರೀರಾಮುಲು ಇದೇ ವೇಳೆ ತಿಳಿಸಿದರು.

ಇನ್ನು ಕಾಂಗ್ರೆಸ್​ನ ಟ್ರಬಲ್​ ಶೂಟರ್​ ಡಿ.ಕೆ ಶಿವಕುಮಾರ್ ಮುಂಬೈನಲ್ಲಿ ನಾಟಕ ಮಾಡುತ್ತಿದ್ದಾರೆ. ಅವರು ದುಖಾನ್ ಬಂದ್ ಮಾಡಬೇಕು. ಈ ರೀತಿ ಡ್ರಾಮಾ ಮಾಡುವ ಅಗತ್ಯವಿಲ್ಲ. ಸಂಖ್ಯಾಬಲವಿಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಅಂತ ಶಾಸಕ ಶ್ರೀರಾಮುಲು ಗುಡುಗಿದರು.

ABOUT THE AUTHOR

...view details