ಬೆಂಗಳೂರು: ನಂಬರ್ ಗೇಮ್ ಆಟದಲ್ಲಿ ಸಮ್ಮಿಶ್ರ ಸರ್ಕಾರದಂತೆ ಬಿಜೆಪಿ ಕೂಡ ಬೀಳಲಿದೆ ಎನ್ನುವ ಆತಂಕದಿಂದ ಬಿಜೆಪಿ ಪಾರಾಗಿದ್ದು ಯಾರ ಬೆಂಬವೂ ಇಲ್ಲದೆ ಬಿಜೆಪಿ ಅಗತ್ಯ ಸಂಖ್ಯಾಬಲವನ್ನು ಅಧಿಕೃತವಾಗಿ ಹೊಂದಿದೆ.
ಒಂದೆಡೆ ಅತೃಪ್ತ ಶಾಸಕರು ಅನರ್ಹಗೊಂಡು ಆತಂಕಕ್ಕೆ ಸಿಲುಕಿದ್ದರೆ ಇತ್ತ ಬಿಜೆಪಿ ಪಾಳಯದಲ್ಲಿ ನೆಮ್ಮದಿಯ ನಿಟ್ಟುಸಿರು ಕಂಡುಬಂದಿದೆ. ಮೊನ್ನೆ ಮೂವರು ಶಾಸಕರನ್ನ ಅನರ್ಹಗೊಳಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ವಿಧಾನಸಭೆಯಲ್ಲಿ 17 ಸ್ಥಾನಗಳು ಖಾಲಿಯಾಗಿದ್ದು, ವಿಧಾನಸಭೆ ಸದಸ್ಯರ ಬಲ 207 ಕ್ಕೆ ಕುಸಿದಿದೆ. ಹಾಗಾಗಿ ಬಹುಮತಕ್ಕೆ ಈ ಹಿಂದೆ ಇದ್ದ 113 ರ ಬದಲು 104 ಮ್ಯಾಜಿಕ್ ನಂಬರ್ ಆಗಿದೆ. ಸ್ಪೀಕರ್ ಸಮಬಲ ಬಂದಾಗ ಮಾತ್ರ ಮತ ಚಲಾಯಿಸಬೇಕಿರುವ ಕಾರಣ 103 ಮ್ಯಾಜಿಕ್ ನಂಬರ್ ಆಗಲಿದೆ.