ಬೆಂಗಳೂರು :ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಟ್ವೀಟ್ ವಾರ್ ಮುಂದುವರಿದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ-ಪ್ರತ್ಯಾರೋಪದ ಮಾಡಿಕೊಂಡಿವೆ.
ಅಖಂಡ ಶ್ರೀನಿವಾಸಮೂರ್ತಿ ಮನೆ ಹಾಗೂ ಕಚೇರಿ ಮೇಲೆ ನಡೆದ ದಾಳಿ ವಿಚಾರವಾಗಿ ಮಾಜಿ ಕಾರ್ಪೊರೇಟರ್ ಆಗಿರುವ ವಿಚಾರವನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಜೈಲು ಮತ್ತು ಬೇಲ್‌ನಲ್ಲಿರುವ ಪಕ್ಷ ಎಂದು ನೋಂದಾಯಿಸಬಹುದಾಗಿದೆ! ಭ್ರಷ್ಟಾಚಾರದಿಂದ ಹಿಡಿದು ಡ್ರಗ್ಸ್, ದೊಂಬಿ ಗಲಭೆಯಲ್ಲಿ ಭಾಗಿಯಾದವರೆಲ್ಲರೂ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಒಬ್ಬ ದಲಿತ ಶಾಸಕನಿಗೆ ನ್ಯಾಯ ಕೊಡಿಸಲಾರದಷ್ಟು ಹೇಡಿಗಳಾಗಿದ್ದಾರೆ ಬಿಜೆಪಿ ಕಿಡಿಕಾರಿತ್ತು.
ಇದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, 'ಆಯ್ಯೋ ರಾಜ್ಯ ಬಿಜೆಪಿಯಲ್ಲಿ ಜೈಲು - ಬೇಲು, ಐಲು-ಪೈಲು ಎಲ್ಲವೂ ನಿಮ್ಮಲ್ಲಿಯೇ ತುಂಬಿ ಹೋಗಿವೆ ! ಭ್ರಷ್ಟರು, ದೇಶವಿರೋಧಿಗಳು, ಸ್ತ್ರೀ ಪೀಡಕರು, ಡ್ರಗ್ಸ್ ದಂಧೆಯ ಸ್ಟಾರ್ ಪ್ರಚಾರಕರು, ಸಂವಿಧಾನ ವಿರೋಧಿಗಳು, ನಾಡು-ನುಡಿಯ ಶತ್ರುಗಳು ನಿಮ್ಮಲ್ಲಿ ಹೇರಳವಾಗಿದ್ದಾರೆ. ಆಡಳಿತದ ದುರುಪಯೋಗದಿಂದ ಕಾಂಗ್ರೆಸ್ಸಿಗರನ್ನ ಗುರಿಯಾಗಿಸುವುದು ಬಿಡಿ' ಎಂದಿದೆ.