ಕರ್ನಾಟಕ

karnataka

ETV Bharat / state

ಬೇಸಿಗೆ ಆರಂಭವಾದ್ರೂ ಖಾಸಗಿ ಟ್ಯಾಂಕರ್​​ಗಳಿಗೆ ಇನ್ನೂ ನಿಯಮ ರೂಪಿಸಿಲ್ಲ ಬಿಬಿಎಂಪಿ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಜಲಮಂಡಳಿ ಚೀಫ್ ಎಂಜಿನಿಯರ್ ಕೆಂಪರಾಮಯ್ಯ ಬೇಸಿಗೆಯ ನೀರಿನ ಪೂರೈಕೆ ಕುರಿತು ಸುದ್ದಿಗೋಷ್ಠಿ ನಡೆಸಿದರು.

By

Published : Mar 15, 2019, 6:16 PM IST

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಜಲಮಂಡಳಿ ಚೀಫ್ ಎಂಜಿನಿಯರ್ ಕೆಂಪರಾಮಯ್ಯ ಬೇಸಿಗೆಯ ನೀರಿನ ಪೂರೈಕೆ ಕುರಿತು ಸುದ್ದಿಗೋಷ್ಠಿ

ಬೆಂಗಳೂರು: ಈಗಾಗಲೇ ಸುಡು ಬಿಸಿಲು ರಾಜಧಾನಿ ಜನರನ್ನು ತತ್ತರಿಸುವಂತೆ ಮಾಡಿದೆ. ನಗರದ ಹಲವೆಡೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಪಾಲಿಕೆ, ಜಲಮಂಡಳಿ ನೀರು ಸಿಗದೇ ಇದ್ದಾಗ ಜನ ಖಾಸಗಿ ಟ್ಯಾಂಕರ್​​ನ ನೀರಿಗೆ ಮೊರೆ ಗೋಗುತ್ತಿದ್ದಾರೆ.

ಇಷ್ಟೆಲ್ಲ ನಡೀತಿದ್ರೂ ಇದೀಗ ಎಚ್ಚೆತ್ತುಕೊಂಡಿರೋ ಬಿಬಿಎಂಪಿ ಖಾಸಗಿ ಟ್ಯಾಂಕರ್​​ಗಳ ಹಾವಳಿಗೆ ತಡೆ ಹಾಕ್ತೀವಿ. ಅವರಿಗೆ ನಿಯಮ ರಚಿಸಲು ತಯಾರಿ ನಡೆಯುತ್ತಿದೆ. ನಿಗದಿತ ದರ, ಲೈಸನ್ಸ್ ಪಡೆದಿರಬೇಕು ಎಂಬೆಲ್ಲಾ ನಿಯಮವನ್ನು ರಚಿಸಲು ಮುಂದಾಗಿದೆ. ಆದ್ರೆ ನಿಯಮ ರಚಿಸಿ, ಆ ನಿಯಮ ಜಾರಿಗೆ ಬರೋವಷ್ಟರಲ್ಲಿ ನಗರದ ಜನ ಪಡಬಾರದ ಕಷ್ಟ ಎದುರಿಸಬೇಕಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಜಲಮಂಡಳಿ ಚೀಫ್ ಎಂಜಿನಿಯರ್ ಕೆಂಪರಾಮಯ್ಯ ಬೇಸಿಗೆಯ ನೀರಿನ ಪೂರೈಕೆ ಕುರಿತು ಸುದ್ದಿಗೋಷ್ಠಿ ನಡೆಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಹಾಗೂ ಜಲಮಂಡಳಿ ಚೀಫ್ ಎಂಜಿನಿಯರ್ ಕೆಂಪರಾಮಯ್ಯ ಬೇಸಿಗೆಯ ನೀರಿನ ಪೂರೈಕೆ ಕುರಿತು ಸುದ್ದಿಗೋಷ್ಠಿ

ಈ ವೇಳೆ ಮಾತನಾಡಿದ ಅವರು, ಖಾಸಗಿ ಟ್ಯಾಂಕರ್​​ಗಳು ಇನ್ಮುಂದೆ ಟ್ರೇಡ್ ಲೈಸನ್ಸ್ ಪಡೆದಿರಬೇಕು. ನೀರಿನ ಮೂಲದ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಬೇಕು. ನೀರಿನ ಗುಣಮಟ್ಟದ ಬಗ್ಗೆ ಪಾಲಿಕೆಗೆ ಮಾಹಿತಿನೀಡಬೇಕು. ಲೋಕೋಪಯೋಗಿ ಇಲಾಖೆಯ ದರವನ್ನೇ ಖಾಸಗಿ ಟ್ಯಾಂಕರ್​​​ಗಳು ನಿಗದಿ ಮಾಡಬೇಕು. ಈ ಬಗ್ಗೆ ಶೀಘ್ರದಲೇ ಮಾನದಂಡ ರಚಿಸಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಇನ್ನೆರಡು ವಾರದಲ್ಲಿ ನಿಯಮ ಜಾರಿಗೆ ಬರಲಿದೆ ಎಂದರು.

ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಪಾಲಿಕೆ ಜೊತೆ ಅಧಿಕಾರಿಗಳು ಸಾಥ್ ನೀಡಿದ್ದು, ನಗರದ 8 ವಲಯಗಳ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ನೀರು ಪೂರೈಕೆ ವಿಚಾರದಲ್ಲಿ ನಗರವನ್ನ ಎರಡು ವಲಯಗಳಾಗಿ ವಿಂಗಡನೆ ಮಾಡಿ110 ಹಳ್ಳಿಗಳಿಗೆ ನೀರು ಪೂರೈಕೆ ಮಾಡೋ ಜವಾಬ್ದಾರಿ ಪಾಲಿಕೆಗೆ ಹಾಗೂ ಉಳಿದ ಪ್ರದೇಶಗಳಿಗೆ ಜಲಮಂಡಳಿ ನೀರು ಪೂರೈಕೆ ಮಾಡಲಿದೆ. ಮುಂದಿನ ಮೂರು ತಿಂಗಳು ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಿಂಗಳು 1.8 ಟಿಎಂಸಿ ನೀರು ಅಗತ್ಯವಿದೆ.ಮುಂದಿನ 3 ತಿಂಗಳಿಗೆ 10 ಟಿಎಂಸಿ ನೀರು ಅಗತ್ಯವಿದೆ.ಕೆಆರ್​ಎಸ್​​ನಲ್ಲಿ 28 ಟಿಎಂಸಿ ನೀರಿದೆ. ನಗರದಲ್ಲಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಪ್ರತಿ ದಿನ 1400 ಎಂಎಲ್​ಡಿ ನೀರು ಅಗತ್ಯವಿದೆ ಎಂದರು.

ಇನ್ನು ನಗರದಲ್ಲಿರೋ ಬೋರ್​ವೆಲ್​​ಗಳ ನಿರ್ವಹಣೆ ಜಲಮಂಡಳಿ ಸುಪರ್ದಿಗೆ ಇದ್ದು, 9891 ಬೋರ್​ವೆಲ್​​ಗಳನ್ನ ಪಾಲಿಕೆ ಕೊರೆಸಿದೆ. ಇದರಲ್ಲಿ 618 ಬೋರ್​ವೆಲ್​​ಗಳು ಕಾರ್ಯನಿರ್ವಹಣೆ ಮಾಡ್ತಿಲ್ಲ. ಇದನ್ನ ಹೊರತು ಪಡಿಸಿ 3,60,000 ಬೋರ್​​ವೆಲ್​​ಗಳು ಖಾಸಗಿ ಜಾಗದಲ್ಲಿವೆ.ಜಲಮಂಡಳಿ 68 ಟ್ಯಾಂಕರ್​ಗಳ ಮೂಲಕ ನೀರು ಪೂರೈಕೆ ಮಾಡಲಿದೆ.

ಕುಡಿಯೋ ನೀರಿನ ಸರಬರಾಜಿಗೆ ವಾರ್ಡ್​ಗಳಿಗೆ ಪ್ರತ್ಯೇಕ ಹಣ ಮೀಸಲಿಡಲಾಗಿದೆ. ಬೇಸಿಗೆಯ ನೀರಿನ ಸಮಸ್ಯೆ ನೀಗಿಸಲು ಐದು ಕೋಟಿ ಮೀಸಲಿಡಲಾಗಿದ್ದು, ಅಗತ್ಯ ಬಿದ್ದರೆ ಸರ್ಕಾರದ‌ ನೆರವು ಕೇಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ABOUT THE AUTHOR

...view details