ಕರ್ನಾಟಕ

karnataka

ETV Bharat / state

ಬಾಬ್ರಿ ಮಸೀದಿ ತೀರ್ಪು ನಮಗೆಲ್ಲರಿಗೂ ಬೇಸರ ತಂದಿದೆ: ಮಲ್ಲಿಕಾರ್ಜುನ ಖರ್ಗೆ - ಬಾಬ್ರಿ ಮಸೀದಿ ತೀರ್ಪೀನ ಬಗ್ಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ

ಬಾಬ್ರಿ ಮಸೀದಿ ತೀರ್ಪು ನಮ್ಮೆಲ್ಲರಿಗೆ ಬೇಸರ ತರಿಸುವ ವಿಚಾರ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

Mallikarjuna kharge
ಮಲ್ಲಿಕಾರ್ಜುನ ಖರ್ಗೆ

By

Published : Oct 1, 2020, 6:26 PM IST

ಬೆಂಗಳೂರು: ಬಾಬ್ರಿ ಮಸೀದಿ‌ ಧ್ವಂಸ ಪ್ರಕರಣ ಸಂಬಂಧ ನ್ಯಾಯಾಂಗ ಕೂಡ ಸಾಕ್ಷಿ ಪರಿಗಣಿಸದೆ ತೀರ್ಪು ನೀಡಿದ್ದು ಸರಿಕಾಣುತ್ತಿಲ್ಲ. ಇದರಿಂದ ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೋಗಲಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಕಾರ್ಯಾಂಗ, ನ್ಯಾಯಾಂಗ ಎರಡೂ ಬೇರೆ ಬೇರೆ. ಬಡ ಜನರಿಗೆ ಸಿಗುವ ತೀರ್ಪು, ಶಿಕ್ಷೆ ಮೊಟಕಾಗಿದೆ. ಇದರಲ್ಲಿ ಪಾರದರ್ಶಕತೆ ಇಲ್ಲ ಅಂತಿದ್ದಾರೆ. ಅಡ್ವಾಣಿಯವರು ರಾಮರಥ ಪ್ರಾರಂಭಿಸಿದ್ರು ಅಲ್ಲಿಂದಲೇ ನಡೆದಿದೆ. ಬಿಜೆಪಿಯವರೇ ಇದಕ್ಕೆ ಕುಮ್ಮಕ್ಕು‌ಕೊಟ್ಟಿದ್ದು. ಹೋಗಲಿ ಕರ ಸೇವಕರು ಎಲ್ಲಿಂದ ಬಂದರು?. ಇಟ್ಟಿಗೆ ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು ಕರಸೇವಕರು ಅಲ್ಲಿ ಏಕಾಏಕಿ‌ ಹೋಗೋಕೆ ಸಾಧ್ಯವೇ?. ಅದಕ್ಕೆ ಯಾರದಾದರೂ ಸಾಥ್ ಬೇಕಲ್ಲವೇ?. ಹಾಗಾದರೆ ಬಾಬರಿ ಮಸೀದಿ ಒಡೆದಿದ್ದು ಯಾರು? ಎಂದು ಪ್ರಶ್ನಿಸಿದರು.

ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ

ಇದು ನಮ್ಮೆಲ್ಲರಿಗೆ ಬೇಸರ ತರಿಸುವ ವಿಚಾರ. ಅನೇಕ ಸಾಕ್ಷಿಗಳನ್ನು ಜನ ನೋಡಿದ್ದಾರೆ. ಮಸೀದಿಯ ಮೇಲೆ ಯಾರು ಹತ್ತಿದ್ದರು, ಯಾರು‌ ಕೂತಿದ್ದರು ಎಲ್ಲವೂ ಗೊತ್ತಿದೆ. ವಿಶ್ವದ ಎಲ್ಲಾ ಪತ್ರಿಕೆಗಳಲ್ಲಿ ದೃಶ್ಯ ರೂಪದ ವರದಿಯಾಗಿದೆ. ವಿಶೇಷ ಸಾಕ್ಷಿ ಇಲ್ಲ ಅಂತ ಸಿಬಿಐ ಕೋರ್ಟ್ ಖುಲಾಸೆ ಮಾಡಿದೆ. ಇದು ನಮ್ಮೆಲ್ಲರಿಗೆ ಬೇಸರ ತರುವ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಅಚ್ಚರಿಯ ಅಭ್ಯರ್ಥಿ ಬರಬಹುದು:ಆರ್.ಆರ್.ನಗರ ಉಪಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಯಾರು ಗೆಲ್ಲಬಹುದು ಅನ್ನೋದನ್ನ ಅಧ್ಯಕ್ಷರು ನೋಡ್ತಾರೆ. ನಮ್ಮ ಸಂಸದರು ಇದರ ಬಗ್ಗೆ ಗಮನ ಇಟ್ಟಿದ್ದಾರೆ. ಒಳ್ಳೆ ಸಪ್ರೈಸ್ ಕ್ಯಾಂಡಿಡೇಟ್ ಬರಬಹುದು ಎಂದು ತಿಳಿಸಿದರು.

ಆದಿತ್ಯನಾಥ್ ರಾಜೀನಾಮೆ ನೀಡಲಿ:ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ನೈತಿಕ‌ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಅತ್ಯಾಚಾರ ವಿಚಾರವಾಗಿ ಮಾತನಾಡಿದ ಅವರು, ಕಾಲೇಜು‌ ಯುವತಿಯನ್ನು ಅತ್ಯಾಚಾರ ಮಾಡಿ ನಾಲಿಗೆ ಕಟ್ ಮಾಡಿದ್ದಾರೆ. ಮಾತನಾಡಬಾರದು ಅಂತ ಕಟ್ ಮಾಡಿರಬಹುದು. ಪ್ರಧಾನಿ ಮೋದಿ ಬಂದ ನಂತರ ಇಂತಹ ಘಟನೆ ನಡೆಯುತ್ತಿವೆ. ಮೇಲ್ವರ್ಗದವರಾದರೆ ಕ್ರಮವನ್ನೇ ತೆಗೆದುಕೊಳ್ಳಲ್ಲ ಎಂದು ಕಿಡಿ ಕಾರಿದರು.

ದೆಹಲಿಯಲ್ಲಿ ನಿರ್ಭಯಾ ಕೇಸ್ ನಲ್ಲಿ ಏನಾಯ್ತು? ಎಲ್ಲರೂ ಮೇಣದ ಬತ್ತಿ ಹಚ್ಚಿ ಪ್ರತಿಭಟಿಸಿದ್ರು. ಆಗ ಇದ್ದವರು ಈಗ ಯಾಕೆ ಬಾಯಿ ಬಿಡ್ತಿಲ್ಲ?. ಬಿಜೆಪಿ ರಾಜ್ಯಗಳಲ್ಲೇ ಇದು ಹೆಚ್ಚಾಗ್ತಿದೆ ಎಂದು ವಾಗ್ದಾಳಿ ನಡೆಸಿದರು.

ABOUT THE AUTHOR

...view details