ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ ಪ್ರಶ್ನಿಸಿದ ಹೆಂಡತಿಯ ಹತ್ಯೆ.... ಅನಾಥವಾಯ್ತು 5 ವರ್ಷದ ಕಂದಮ್ಮ - kannada news

ಗಂಡನ ಅನೈತಿಕ ಸಂಬಂಧವನ್ನ ಪ್ರಶ್ನಿಸಿದ ಹೆಂಡತಿಯನ್ನ ಉಸಿರುಗಟ್ಟಿಸಿ ಕೊಂದ ಗಂಡ.

ಗಂಡನ ಅನೈತಿಕ ಸಂಬಂಧವನ್ನ ಪ್ರಶ್ನಿಸಿದ ಹೆಂಡತಿಯನ್ನ ಕೊಂದ ಗಂಡ

By

Published : Apr 23, 2019, 9:54 PM IST

ಬೆಂಗಳೂರು:ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನೇ ಕೊಂದು ನೇಣು ಹಾಕಿಕೊಂಡಿದ್ದಾಳೆ ಎಂಬ ಆತ್ಮಹತ್ಯೆಯ ನಾಟವಾಡಿದ್ದ ಆರೋಪಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾನೆ.

ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದ್ದು, ಆಂಧ್ರ ಪ್ರದೇಶದ ಚಿತ್ತೂರು ಮೂಲದ ರಮೇಶ್ ಬಾಬು ಎಂಬಾತ ಈ ಕೃತ್ಯವನ್ನ ಎಸಗಿದವ. ಮದುವೆಯಾಗಿ 5 ವರ್ಷದ ಮಗುವಿದ್ದರೂ ಸಹ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದನಂತೆ. ಈ ವಿಚಾರವಾಗಿ ಪ್ರಶ್ನಿಸಿದ ಹೆಂಡತಿ ಪ್ರಿಯಾಂಕಾ(26) ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸಾಯಿಸಿದ್ದಾನೆ. ನಂತರ ಆತ್ಮಹತ್ಯೆಯ ನಾಟಕವಾಡಿದ್ದ.

ಗಂಡನ ಅನೈತಿಕ ಸಂಬಂಧವನ್ನ ಪ್ರಶ್ನಿಸಿದ ಹೆಂಡತಿಯನ್ನ ಕೊಂದ ಗಂಡ

ಮೂಗಿನಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿ ಸಾಯಿಸಿದ ಬಳಿಕ ಅವಳದ್ದೇ ವೇಲ್​ನಿಂದ ನೇಣು ಹಾಕಿ ಆತ್ಮಹತ್ಯೆಯ ನಾಟಕವಾಡಿದ್ದ. ಆದ್ರೆ ಮೂಗಿನಲ್ಲಿ ಸುರಿಯುತ್ತಿದ್ದ ರಕ್ತ ನಡೆದ ಘಟನೆಗೆ ಸಾಕ್ಷಿಯಾಗಿತ್ತು. ಸ್ಥಳಕ್ಕಾಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯವನ್ನ ಬಾಯ್ಬಿಟ್ಟಿದ್ದಾನೆ.

ವೈಟ್‌ಫೀಲ್ಡ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಮೇಶ್‌‌ ಕುಡಿತದ ಚಟ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ಹಿರಿಯರು ಬುದ್ಧಿ ಮಾತನ್ನ ಹೇಳಿದ್ದರು ಸಹ ತಿದ್ದಿಕೊಳ್ಳದೆ ತನ್ನ ಹಳೆ ಚಾಳಿ ಮುಂದುವರೆಸಿದ್ದನಂತೆ. ಪರಿಣಾಮವಾಗಿ ಹೆಂಡತಿ ಸಾವನ್ನಪ್ಪಿ, ಮಗು ಅನಾಥವಾಗಿದೆ.

ABOUT THE AUTHOR

...view details