ಆನೇಕಲ್:ಚಲಾವಣೆಗೊಳ್ಳುವ ನೋಟ್ಗಳನ್ನು ಕಲರ್ ಝೆರಾಕ್ಸ್ ಮಾಡಿಸಿ ಸಂತೆಯಲ್ಲಿ ವರ್ಗಾಯಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸೂರ್ಯಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೋಟು ಕಲರ್ ಝೆರಾಕ್ಸ್ ಮಾಡಿ ಸಂತೆಯಲ್ಲಿ ಚಲಾವಣೆ: ಇಬ್ಬರ ಬಂಧನ - notes in color xeroxes
ರಾಜಸ್ಥಾನ ಮೂಲದ ನರೇಶ್(25), ತಮಿಳುನಾಡಿನ ಹೊಸೂರಿನಲ್ಲಿ 5,01,00,200 ರೂ.ನಷ್ಟು ನೋಟ್ಗಳನ್ನು ಕಲರ್ ಝೆರಾಕ್ಸ್ ಮಾಡಿಸಿ, ತಮಿಳುನಾಡು ಮೂಲದ ಸುರೇಶ್(45) ಎಂಬಾತನ ಮೂಲಕ ಚಲಾವಣೆಗೆ ಇಳಿಸಿದ್ದ. ಬಂದ ಲಾಭದಲ್ಲಿ ಇಬ್ಬರು ಅರ್ಧ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಇಬ್ಬರ ಬಂಧನ
ರಾಜಸ್ಥಾನ ಮೂಲದ ನರೇಶ್(25) ತಮಿಳುನಾಡಿನ ಹೊಸೂರಿನಲ್ಲಿ 5,01,00,200 ರೂ.ನಷ್ಟು ನೋಟ್ಗಳನ್ನು ಕಲರ್ ಝೆರಾಕ್ಸ್ ಮಾಡಿಸಿ, ತಮಿಳುನಾಡು ಮೂಲದ ಸುರೇಶ್(45) ಎಂಬಾತನ ಮೂಲಕ ಚಲಾವಣೆಗೆ ಇಳಿಸಿದ್ದ. ಬಂದ ಲಾಭದಲ್ಲಿ ಇಬ್ಬರು ಅರ್ಧ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಕಲರ್ ಝೆರಾಕ್ಸ್ ಮಾಡಿರುವ ನೋಟ್ಗಳು
ಚಂದಾಪುರ ಭಾಗದ ಸಂತೆ ಆಜುಬಾಜಿನಲ್ಲಿ ನೋಟ್ಗಳನ್ನು ಚಲಾವಣೆ ಮಾಡುವ ಸಂದರ್ಭದಲ್ಲಿ ಸೂರ್ಯ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಟ್ಟು 5,450 ರೂ.ಗಳ ಕಲರ್ ಝೆರಾಕ್ಸ್ ನೋಟ್ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.