ಬೆಂಗಳೂರು: ವರದಕ್ಷಿಣೆ ದಾಹಕ್ಕಾಗಿ ಕತ್ತರಿಯಿಂದ ಹೆಂಡತಿ ಕೊರಳಿಗೆ ತಿವಿದು ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿ ಇದೀಗ ಯಲಹಂಕ ಪೊಲೀಸರ ಅತಿಥಿಯಾಗಿದ್ದಾನೆ.
ವರದಕ್ಷಿಣೆಗಾಗಿ ಪತ್ನಿಗೆ ಕತ್ತರಿಯಿಂದ ಇರಿದು ಪರಾರಿಯಾಗಿದ್ದ ಪತಿರಾಯ ಬಂಧನ - Dowry
ವರದಕ್ಷಿಣೆಗಾಗಿ ಹೆಂಡತಿಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಯಲಹಂಕದ ಅಳ್ಳಾಲಸಂದ್ರದ ಜಾನ್ಸನ್ ಬಂಧಿತ. ನಂದಿನಿ ಕೊಲೆಯಾದ ಪತ್ನಿ. 2015ರಲ್ಲಿ ಜಾನ್ಸನ್, ನಂದಿನಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪ್ರಾರಂಭಿಕ ವರ್ಷಗಳಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ನಂತರ ಜಾನ್ಸನ್ ಕುಡಿತದ ಚಟಕ್ಕೆ ಬಿದ್ದು ಪ್ರತಿದಿನ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸಿಸುತ್ತಿದ್ದ.
ಎಂದಿನಂತೆ ಕುಡಿದು ಆಗಸ್ಟ್ 16ರಂದು ವರದಕ್ಷಿಣೆ ವಿಚಾರಕ್ಕಾಗಿ ಹೆಂಡತಿಯೊಂದಿಗೆ ಜಗಳವಾಡಿದ್ದ. ದಂಪತಿ ನಡುವಿನ ಜಗಳ ತಾರಕಕ್ಕೇರಿತ್ತು. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಕತ್ತರಿಯಿಂದ ಹೆಂಡತಿಯ ಕೊರಳಿಗೆ ತಿವಿದಿದ್ದ. ತಿವಿದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಸ್ತಳದಲ್ಲೇ ಹೆಂಡತಿ ಪ್ರಾಣಬಿಟ್ಟಿದ್ದಳು.