ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರ ವಿಳಂಬ ತಂತ್ರವನ್ನ ಅನುಸರಿಸುತ್ತಿದೆ: ಸಿ. ಟಿ. ರವಿ - undefined

ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿರೋದು ಸ್ಪಷ್ಟವಾಗಿ ಕಾಣುತ್ತಿದೆ. ಆದ್ರೆ, ಸರ್ಕಾರ ಉಳಿಸಿಕೊಳ್ಳಲು ಬೇರೆ ಬೇರೆ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.

ಸಿ. ಟಿ. ರವಿ

By

Published : Jul 18, 2019, 4:20 PM IST

ಬೆಂಗಳೂರು: ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿರುವ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿರೋದು ಸ್ಪಷ್ಟವಾಗಿ ಕಾಣುತ್ತೆ. ಆದ್ರೆ ವಿಶ್ವಾಸ ಮತಯಾಚನೆ ನೆಪದಲ್ಲಿ ಮ್ಯಾಕ್ಸ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಅಂತ ಬಿಜೆಪಿ ವಕ್ತಾರ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.

ಬಿಧಾನಸೌಧದಲ್ಲಿ ಮಾತನಾಡಿದ ಅವರು, ವಿಶ್ವಾಸಮತಕ್ಕೆ ಅಗತ್ಯವಿರುವ ಶಾಸಕರು ಬರುವವರೆಗೂ ವಿಶ್ವಾಸಮತ ಯಾಚನೆಯನ್ನೇ ಮುಂದೂಡುವುದು ಸೇರಿದಂತೆ ಬೇರೆ ಬೇರೆ ಪ್ರಯತ್ನದಲ್ಲಿ ಸರ್ಕಾರ ಉಳಿಸಿಕೊಳ್ಳಲು ತಂತ್ರ ನಡೆದಿದೆ ಎಂದು ದೂರಿದರು.

ಸ್ಪೀಕರ್ ಸಂವಿಧಾನವೇ ದೇವರು ಅಂತಾರೆ. ಆದ್ರೆ ಸದನದೊಳಗೆ ರಾಜಕೀಯದ ಆಟ ಮಾಡುವುದು ಸರಿಯಲ್ಲ. ಸರ್ಕಾರ ಬಹುಮತವನ್ನ ಕಳೆದುಕೊಂಡಿದೆ. ಸದನದಲ್ಲಿ ಬಿಜೆಪಿ ಸದಸ್ಯರು ಸಂಖ್ಯೆ 105 ಇದೆ. ಮೈತ್ರಿ ಸರ್ಕಾರದ ಸದಸ್ಯರ ಸಂಖ್ಯೆ 98. ಇದರಿಂದಲೇ ಗೊತ್ತಾಗುತ್ತದೆ ವಿಶ್ವಾಸ ಕಳೆದುಕೊಳ್ಳುವ ಆತಂಕ. ಹೀಗಾಗಿ ಸದನವನ್ನ ಎಳೆದಾಡುವ ಪ್ರಯತ್ನ ನಡೆದಿದೆ ಎಂದು ಶಾಸಕ ಸಿ ಟಿ ರವಿ ವಾಗ್ದಾಳಿ ನಡೆಸಿದ್ರು.

ಸಿ. ಟಿ. ರವಿ

15 ದಿನದ ಸರ್ಕಸ್​​​ನಲ್ಲೂ ಅವರು ಫೇಲಾಗಿದ್ದಾರೆ. ವಿಶ್ವಾಸ ಮತಯಾಚನೆ ಮುಂದೂಡುವ ಪ್ರಯತ್ನ ನಡೆದಿದೆ. ಪಾಯಿಂಟ್ ಆಫ್ ಆರ್ಡರ್ ನಡಿ ಚರ್ಚೆಗೆ ಹೆಚ್ಚು ಅವಕಾಶ ನೀಡಿದ್ದಾರೆ. ಇಂತ ಚರ್ಚೆಯನ್ನ ನಾನು ನೋಡಿಯೇ ಇಲ್ಲ. ಬಹುಮತ ಇಲ್ಲದಿರುವುದನ್ನ ಸ್ಪೀಕರ್​ ಗಮನಿಸಿದ್ದಾರೆ. ರಾಜ್ಯಪಾಲರು, ಸುಪ್ರೀಂ ಇದನ್ನ ನೋಡ್ತಿದ್ದಾರೆ. ನಾವು ಕೂಡ ಎಲ್ಲವನ್ನೂ ನೋಡಿ ತೀರ್ಮಾನ ತೆಗೆದುಕೊಳ್ತೇವೆ ಎಂದು ಸಿ ಟಿ ರವಿ ರವಿ ಹೇಳಿದರು.

For All Latest Updates

TAGGED:

ABOUT THE AUTHOR

...view details