ಬೆಂಗಳೂರು : ದೇವನಹಳ್ಳಿ ಪುರಸಭೆ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಎಸಿಪಿ ದರ್ಪ ಮರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳ ಮೇಲೆ ಎಸಿಪಿ ದರ್ಪ ಆರೋಪ - kannada news paper
ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಹೊರ ಹೋಗಿ ಇಲ್ಲಾ ಬಂಧಿಸಿ ಜೈಲಿಗಟ್ಟಿಸುತ್ತೇನೆ ಎಂದು ದೇವನಹಳ್ಳಿ ಎಸಿಪಿ ಮುರುಳೀಧರ್ ಅವಾಜ್ ಹಾಕಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಆರೋಪಿಸಿದ್ದಾರೆ.
ದೇವನಹಳ್ಳಿ ಪುರಸಭೆ ಫಲಿತಾಂಶದ ಹಿನ್ನೆಲೆ ಚುನಾವಣಾಧಿಕಾರಿಗಳು ಮಾಧ್ಯಮ ಮಾಹಿತಿ ಕೇಂದ್ರ ತೆರೆದಿದ್ದು, ಫಲಿತಾಂಶಕ್ಕಾಗಿ ಅಲ್ಲಿ ಕಾದು ಕುಳಿತಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಹೊರ ಹೋಗಿ ಇಲ್ಲಾ ಬಂಧಿಸಿ ಜೈಲಿಗಟ್ಟಿಸುತ್ತೆನೆ ಎಂದು ದೇವನಹಳ್ಳಿ ಎಸಿಪಿ ಮುರುಳಿಧರ್ ಅವಾಜ್ ಹಾಕಿದ್ದಾರೆ. ಜನ ಪ್ರತಿನಿಧಿಗಳನ್ನು ಮತ್ತು ಮುಖಂಡರನ್ನು ತಡೆಯಲಾಗದೆ ಮಾಧ್ಯಮ ಪ್ರತಿನಿಧಿಗಳ ಮೇಲೆ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆ ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಮತ್ತು ಪತ್ರಕರ್ತರು ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ ಎಸಿಪಿ ಕ್ಷಮೆ ಯಾಚಿಸುವಂತೆ ಹಾಗೂ ಅವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.