ಬೆಂಗಳೂರು :ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರ ವಾಹನ ಕಳ್ಳತನವನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದ ಆರೋಪಿ ಅಂದರ್ - Operation of Bengaluru Indiranagar Police
ಆರೋಪಿ ಬಾಲರಾಜ್ ಇಂದಿರಾನಗರ ಠಾಣೆ ವ್ಯಾಪ್ತಿಯ ಸಿ ಹೆಚ್ ಆಸ್ಪತ್ರೆಯ ಎದುರು ನ.25ರಂದು ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನ ಮಾಡಿಕೊಂಡು ಹೋಗಿದ್ದ..
ಮೂಲತಃ ಹಾವೇರಿ ಜಿಲ್ಲೆಯ ನಿವಾಸಿಯಾಗಿದ್ದರೂ ಈಗ ಹಲಸೂರಿನಲ್ಲಿ ನೆಲೆಸಿದ್ದ ಬಾಲರಾಜ್(50) ಎಂಬಾತ ಬಂಧಿತ ಆರೋಪಿ. ಆತನಿಂದ 6.80 ಲಕ್ಷ ರೂ. ಮೌಲ್ಯದ 10 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಇಂದಿರಾನಗರ ಮತ್ತು ಇತರೆ ಠಾಣೆಯಲ್ಲಿ ದಾಖಲಾಗಿದ್ದ 6 ಪ್ರಕರಣ ಪತ್ತೆಯಾಗಿವೆ.
ಆರೋಪಿ ಬಾಲರಾಜ್ ಇಂದಿರಾನಗರ ಠಾಣೆ ವ್ಯಾಪ್ತಿಯ ಸಿ ಹೆಚ್ ಆಸ್ಪತ್ರೆಯ ಎದುರು ನ.25ರಂದು ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈತ ವಾಹನ ಕಳ್ಳತನವನ್ನೇ ಉದ್ಯೋಗವನ್ನಾಗಿಸಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.