ಬೆಂಗಳೂರು: ಇಲ್ಲಿನ ಗುರಪ್ಪನಪಾಳ್ಯದಲ್ಲಿ ವಾಸವಿದ್ದ ಉಗ್ರ ಪಾಷಾ, ಮನೆ ಪಕ್ಕದಲ್ಲಿ ಅಲ್ ಹಿಂದ್ ಎಜುಕೇಷನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ನಿತ್ಯ ಕರಾಟೆ ತರಬೇತಿ ಜೊತೆಗೆ ಉಗ್ರಗಾಮಿಗಳಿಗೂ ಟ್ರೈನಿಂಗ್ ನೀಡುತ್ತಿದ್ದ ವಿಷಯವನ್ನು ಸಿಸಿಬಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.
ಸಿಲಿಕಾನ್ ಸಿಟಿ ಸೇರಿದಂತೆ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿದ್ದ ಉಗ್ರ ಮೆಹಬೂಬ್ ಪಾಷಾನನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದರು.