ಕರ್ನಾಟಕ

karnataka

ETV Bharat / state

ಹೆಚ್ಚು ಊಟ ಕೇಳುತ್ತೆ ಅಂತಾ ಬೆಂಕಿಯಿಂದ ಮೊಮ್ಮಗನ ಮೈ ಸುಟ್ಟು ವಿಕೃತಿ ಮೆರೆದ ಅಜ್ಜಿ! - ಅಜ್ಜಿಯಿಂದ ಮೊಮ್ಮಗನ ಮೇಲೆ ಹಲ್ಲೆ

ಮಗು ಹೆಚ್ಚು ಊಟ ಕೇಳುತ್ತೆ ಎಂದು ಅಜ್ಜಿ ಮಗುವಿನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬೆಂಕಿಯಿಂದ ಅಲ್ಲಲ್ಲಿ ಸುಟ್ಟಿದ್ದಾರೆ.

grandmother burning her grandson in Banglore
ಬೆಂಕಿಯಿಂದ ಮೊಮ್ಮಗನ ಮೈ ಸುಟ್ಟು ವಿಕೃತಿ ಮೆರೆದ ಅಜ್ಜಿ

By

Published : Aug 29, 2020, 9:48 AM IST

ಬೆಂಗಳೂರು: ಹೆಚ್ಚು ಊಟ ಕೇಳ್ತಾನೆ ಎಂಬ ಕಾರಣಕ್ಕಾಗಿ ಎರಡು ವರ್ಷದ ಮಗುವಿನ ಮೇಲೆ ಅಜ್ಜಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಗುರಪ್ಪನಪಾಳ್ಯದಲ್ಲಿ ಈ ಘಟನೆ ನಡೆದಿದೆ‌‌. ಮಗುವಿನ ಅಜ್ಜಿ ಮುಬೀನಾ ಹಾಗೂ ತಾಯಿ ಅಜೀರಾ ಹಲ್ಲೆ ಮಾಡಿದವರು.‌ ಗಂಭೀರವಾಗಿ ಗಾಯಗೊಂಡಿರುವ ಕಂದಮ್ಮನನ್ನು ಸ್ಥಳೀಯರ ನೆರವಿನಿಂದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ರವಾನಿಸಲಾಗಿದೆ‌.

ಅಜ್ಜಿಯಿಂದಲೇ ಮೊಮ್ಮಗನ ಮೇಲೆ ಹಲ್ಲೆ

ಗುರಪ್ಪನಪಾಳ್ಯದಲ್ಲಿ ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿ ವಾಸವಾಗಿದ್ದಾರೆ.‌ ಅಜ್ಜಿ ಮುಬೀನಾ ಸಹ ಇವರೊಂದಿಗೆ ನೆಲೆಸಿದ್ದರು. ಮಗು ಹೆಚ್ಚು ಊಟ ಕೇಳುತ್ತೆ ಎಂದು ಮಗುವಿಗೆ ಕಳೆದ 15 ದಿನಗಳಿಂದ ನಿರಂತವಾಗಿ ಹೊಡೆದು ಹಲ್ಲೆ ಮಾಡಿದ್ದಾರೆ. ಬೆಂಕಿಯಿಂದ ಮಗುವಿನ ಮೈ ಸುಟ್ಟಿದ್ದಾರೆ. ಮಗುವಿನ ಮೈ ಸುಟ್ಟು ಹಲ್ಲೆ ನಡೆಸುತ್ತಿದ್ದರೂ ತಾಯಿ ಅಜೀರಾ ವಿರೋಧ ವ್ಯಕ್ತಪಡಿಸಿಲ್ಲವಂತೆ. ಈ ಬಗ್ಗೆ ಗಂಡ ಇಮ್ರಾನ್ ಪಾಷಾ ಮಗುವಿನ ಗಾಯಗಳ ಬಗ್ಗೆ ಕೇಳಿದರೆ ಅತ್ತೆ-ಮಗಳು ಯಾವುದೋ ಕಾರಣ ಹೇಳಿ ಯಾಮಾರಿಸುತ್ತಿದ್ದರಂತೆ.

ಕೆಲ ದಿನಗಳ ಬಳಿಕ ಹಲ್ಲೆ ಮಾಡುತ್ತಿರುವ ಬಗ್ಗೆ ಇಮ್ರಾನ್ ಪ್ರಶ್ನಿಸಿದರೆ, ಹೆಚ್ಚಾಗಿ ಮಾತನಾಡಿದರೆ ನೀನು ನಿನ್ನ ಮಕ್ಕಳ ಜೊತೆ ಮನೆ ಖಾಲಿ ಮಾಡು ಎಂದು ಅತ್ತೆ ಹೇಳುತ್ತಿದ್ದಳಂತೆ. ಈ ಬಗ್ಗೆ ಸ್ಥಳೀಯರು ಮೈಕೊ ಲೇಔಟ್ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ ಮಗುವನ್ನು ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details