ಬೆಂಗಳೂರು: ಮೂಡಲಪಾಳ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಅಕ್ಷಯ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಲಪಾಳ್ಯದ ಬಳಿ ಡಿಸೆಂಬರ್ 3 ರಂದು ಅಕ್ಷಯ್ ಸ್ನೇಹಿತನ ಜನ್ಮದಿನದ ಪಾರ್ಟಿ ಮುಗಿಸಿ ಬುಲೆಟ್ ಬೈಕ್ನಲ್ಲಿ ಬರುತ್ತಿದ್ದ. ಇದೇ ವೇಳೆ ರಾಂಗ್ ಸೈಡ್ನಿಂದ ಬಂದ ಕಾರು ರಭಸವಾಗಿ ಬಂದು ಅಕ್ಷಯ್ ಬೈಕ್ಗೆ ಗುದ್ದಿತ್ತು. ಪರಿಣಾಮ ಸೊಂಟದ ಸ್ವಾಧೀನ ಕಳೆದುಕೊಂಡ ಅಕ್ಷಯ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.