ಬೆಂಗಳೂರು: ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಒಬ್ಬ ಹೆಣ್ಣುಮಗಳನ್ನು ಎಳೆದಾಡುವುದು ಬಿಜೆಪಿ ಸಂಸ್ಕೃತಿ: ಡಿಕೆಶಿ ವ್ಯಂಗ್ಯ - ತೇರದಾಳದ ಘಟನೆ
ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿಯನ್ನ ತೋರಿಸುತ್ತಿದೆ. ಬೇರೆ ಸಂದರ್ಭದಲ್ಲಿ ಪೊಲೀಸರು ಸೋಮೋಟ್ ಕೇಸ್ ಹಾಕ್ತಾರೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಕ್ರಮ ಆಗಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ನೋಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿ ಯನ್ನ ತೋರಿಸುತ್ತೆ. ಬೇರೆ ಸಂದರ್ಭದಲ್ಲಿ ಪೊಲೀಸರು ಸುಮೋಟ್ ಕೇಸ್ ಹಾಕ್ತಾರೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಕ್ರಮ ಆಗಿಲ್ಲ. ಘಟನೆ ಸರಿಯೋ ತಪ್ಪೋ ಅನ್ನೋದನ್ನ ಮುಖ್ಯಮಂತ್ರಿಗಳಿಗೆ ಬಿಟ್ಟು ಬಿಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ನೋಡುತ್ತಿದ್ದೇವೆ ಎಂದಿದ್ದಾರೆ.
ಒಂದು ಹೆಣ್ಣು ಮಗಳನ್ನ ಎಳೆದಾಡಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ. ಭೀಮಾ ನಾಯಕ್ ತೊಡೆ ತಟ್ಟಿದ್ದು ಬೇರೆ, ಆ ವಿಚಾರದಲ್ಲಿ ಸಹ ಪ್ರತಿಪಕ್ಷ ನಾಯಕರು ಮಾತನಾಡಿದ್ದಾರೆ. ಮತ್ತೆ ಆ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.