ಬೆಂಗಳೂರು :ಗ್ರಾಹಕರೊಬ್ಬರ ಪ್ರತಿಷ್ಠಿತ ಬ್ಯಾಂಡ್ನ ಹೊಸ ಪ್ಯಾಂಟ್ನ ಬಟ್ಟೆಯ ವಿನ್ಯಾಸ ವಿರೂಪಗೊಳಿಸಿದ ಟೈಲರ್‌ಗೆ ನಗರದ ಗ್ರಾಹಕ ಹಕ್ಕು ನ್ಯಾಯಾಲಯ ಹತ್ತು ಸಾವಿರ ರುಪಾಯಿಗಳ ಪರಿಹಾರ ನೀಡುವಂತೆ ಸೂಚನೆ ನೀಡಿದೆ.
ರಾಯಣ್ಣಗೌಡ ಸಲ್ಲಿಸಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಪ್ಯಾಂಟ್ ಬಟ್ಟೆಗೆ ಪಾವತಿಸಿದ 1998 ರೂ.ಗಳು, ಹೊಲಿಗೆ ವೆಚ್ಚ 550ಕ್ಕೆ ಶೇಕಡಾ 9ರ ಬಡ್ಡಿಯ ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿದ ಪರಿಣಾಮ 5000 ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಹಲವು ದಿನಗಳ ಕಾಲ ಕಾನೂನು ಹೋರಾಟ ನಡೆಸಿದ ಪರಿಣಾಮ ಹೆಚ್ಚುವರಿಯಾಗಿ 5000 ರೂಗಳನ್ನು ನೀಡಬೇಕು ಎಂದು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ :ವಿಜಯಪುರದ ನಿವಾಸಿ ರಾಯಣ್ಣ ಗೌಡ ಎಂಬುವರು 2016 ರಲ್ಲಿ ಬೆಂಗಳೂರಿನ ನಗರದಲ್ಲಿ 1988 ರೂ.ಗಳ ಮುಖ ಬೆಲೆಯ ಪ್ರತಿಷ್ಠಿತ ಕಂಪನಿಯಲ್ಲಿ ಪ್ಯಾಂಟ್ ಬಟ್ಟೆ ಖರೀದಿಸಿದ್ದರು. ಜತೆಗೆ ಅದೇ ಮಳಿಗೆಯಲ್ಲಿದ್ದ ಟೈಲರ್ ಬಳಿ ಹೊಲಿಯಲು ಸೂಚಿಸಿದ್ದರು.