ಬೆಂಗಳೂರು:ಸರ್ಕಾರಿ ಸೇವೆಗಳನ್ನು ಜನರಿಗೆ ಕಾಲಮಿತಿಯಲ್ಲಿ ಒದಗಿಸುವ ಉದ್ದೇಶದಿಂದ ಸರ್ಕಾರ ಸಕಾಲ ಯೋಜನೆಯನ್ನು ಜಾರಿಗೊಳಿಸಿತು. ಆದರೆ, ಬರಬರುತ್ತಾ ಸಕಾಲ ವಿಭಾಗ ಕೂಡಾ ದುರ್ಬಲವಾಗುತ್ತಾ ಬರುತ್ತಿದೆ. ವಿನಾಕಾರಣ ಸಕಾಲ ಅರ್ಜಿಗಳ ತಿರಸ್ಕಾರ, ದುಡ್ಡು ಕೊಟ್ಟರೆ ಮಾತ್ರ ಕೆಲಸ ಎಂಬ ಭ್ರಷ್ಟಾಚಾರದ ಪದ್ಧತಿ ಮುಂದುವರೆದಿದೆ.
ಬಿಡಿಎಯಲ್ಲಿ 'ಸಕಾಲ ಸಪ್ತಾಹ'; ಸಕಾಲದಡಿ ಹತ್ತು ಸೇವೆಗಳು ಲಭ್ಯ - Sakala services available
ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ದುರ್ಬಲವಾಗುತ್ತಾ ಬಂದಿರುವ ಸಕಾಲ ಯೋಜನೆ ಬಲಪಡಿಸುವ ಸಲುವಾಗಿ ಸರ್ಕಾರ ಮತ್ತೆ ಹೊಸ ಹೆಜ್ಜೆ ಇಟ್ಟಿದೆ. ಬಿಡಿಎಯಲ್ಲಿ ಹತ್ತು ಸೇವೆಗಳನ್ನು ಸಕಾಲದಡಿ ಪಡೆಯುವ ಅವಕಾಶ ಇದ್ದು, ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಡಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಡಿಎಯಲ್ಲಿ 'ಸಕಾಲ ಸಪ್ತಾಹ'
ಈ ನಡುವೆ ಮತ್ತೆ ಸಕಾಲ ಯೋಜನೆಯನ್ನು ಚುರುಕುಗೊಳಿಸಲು ಸರ್ಕಾರಿ ಇಲಾಖೆಗಳಲ್ಲಿ ಸಕಾಲ ಸಪ್ತಾಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬಿಡಿಎಯಲ್ಲಿಯೂ ಹತ್ತು ಸೇವೆಗಳನ್ನು ಸಕಾಲದಡಿ ಪಡೆಯುವ ಅವಕಾಶ ಇದ್ದು, ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಡಿಎ ಪ್ರಕಟಣೆ ಹೊರಡಿಸಿದೆ. ಸಕಾಲ ಸಪ್ತಾಹದ ಅವಧಿಯಲ್ಲಿ ಹೊಸದಾಗಿ ಸ್ವೀಕರಿಸುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ, ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ, ಸಕಾಲ ಕುರಿತು ಅರಿವು ಮೂಡಿಸುವ ಕ್ರಮಕೈಗೊಳ್ಳಲಾಗಿದೆ.