ಕರ್ನಾಟಕ

karnataka

ETV Bharat / state

ಹತ್ತು ಜನ ಡಿಸಿಎಂ ಮಾಡಿದರೂ ತೊಂದರೆ ಇಲ್ಲ.. ಹೆಚ್.ವಿಶ್ವನಾಥ್

ಆಡಳಿತಕ್ಕೆ ಸಹಾಯ ಆಗಲಿ ಎಂದು ಡಿಸಿಎಂ ನೇಮಕ ಮಾಡಲಾಗುತ್ತದೆ. ಹಾಗಾಗಿ ಹತ್ತು ಜನ ಡಿಸಿಎಂ ನೇಮಕ ಮಾಡಿದರೂ ತೊಂದರೆ ಇಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದರು.

ಹತ್ತು ಜನ ಡಿಸಿಎಂ ಮಾಡಿದರೂ ತೊಂದರೆ ಇಲ್ಲ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು.

By

Published : Sep 7, 2019, 4:27 PM IST

ಬೆಂಗಳೂರು: ಆಡಳಿತಕ್ಕೆ ಸಹಾಯ ಆಗಲಿ ಎಂದು ಡಿಸಿಎಂ ನೇಮಕ ಮಾಡಲಾಗುತ್ತದೆ. ಹಾಗಾಗಿ ಹತ್ತು ಜನ ಡಿಸಿಎಂ ನೇಮಕ ಮಾಡಿದ್ರೂ ತೊಂದರೆ ಇಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು.

ಡಿಸಿಎಂ ಹುದ್ದೆ ಬಗ್ಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೀಗಂತಾರೆ..

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಐವರನ್ನು ಡಿಸಿಎಂ ಮಾಡುತ್ತಿದ್ದು, ನೀವೂ ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಮಂತ್ರಿ, ಉಪ ಮುಖ್ಯಮಂತ್ರಿ ಯಾವ ಸ್ಥಾನದ ಆಪೇಕ್ಷೆಯೂ ತಮಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವನಾಥ್​ರ ಉತ್ತರಾಧಿಕಾರಿ ಯಾರು ಎಂಬ ವಿಚಾರವಾಗಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಮತ್ತೆ ನಾನು ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ಮಗ ನಿಲ್ಲಬಹುದು. ಅಲ್ಲಿಯ ಮತದಾರರು, ಮುಖಂಡರು ಚರ್ಚೆ ಮಾಡಿ ನಿಲ್ಲಿಸಿದರೆ ನಿಲ್ಲುತ್ತಾನೆ ಎಂದು ವಿವರಿಸಿದರು.

ಜೆಡಿಎಸ್ ವಿರುದ್ಧ ಜಿ ಟಿ ದೇವೇಗೌಡ ಅಸಮಾಧಾನ ವ್ಯಕ್ಯಪಡಿಸಿದ ಸಂಬಂಧ ಪ್ರತಿಕ್ರಿಯಿಸಿದ ಅವರು, ಜೆಡಿಎಸ್​ನಲ್ಲಿ ಕುಮಾರಸ್ವಾಮಿಯವರ ಅಸಮಾಧಾನ, ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯನವರ ಅಸಮಾಧಾನ. ಅದರಿಂದಲೇ ಮೈತ್ರಿ ಸರ್ಕಾರ ಪತನವಾಯ್ತು. ಈಗಲೂ ಜೆಡಿಎಸ್​ನಲ್ಲಿ ಹಲವರಿಗೆ ಅಸಮಾಧಾನ ಇರಬಹುದು‌ ಎಂದು ತಿಳಿಸಿದರು.

ABOUT THE AUTHOR

...view details