ಬೆಂಗಳೂರು:ಭಾರತೀಯ ರೈಲ್ವೆ ಮಂಡಳಿ (ಐಆರ್ಟಿಸಿಎಲ್) ನಕಲಿ ಐಡಿ ಸೃಷ್ಟಿಸಿಕೊಂಡು ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮೂಲಕ ಹಣ ಗಳಿಸುತ್ತಿದ್ದ 10 ಮಂದಿ ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ನಕಲಿ ಐಡಿ ಬಳಸಿ ರೈಲ್ವೆ ಟಿಕೆಟ್ ಬುಕ್ಕಿಂಗ್: ಬೆಂಗಳೂರಲ್ಲಿ 10 ಆರೋಪಿಗಳ ಬಂಧನ - ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್
ನಕಲಿ ಐಡಿ ಸೃಷ್ಟಿಸಿಕೊಂಡು ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮೂಲಕ ಹಣ ಗಳಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ 10 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕೆಂಗೇರಿ, ಮಾಗಡಿ ರೋಡ್, ಚಿಕ್ಕಪೇಟೆ, ತಾವರೆಕೆರೆ, ರಾಮಮೂರ್ತಿ ನಗರ ಹಾಗೂ ರಾಮನಗರದಲ್ಲಿ ಆನ್ನ್ಲೈನ್ ಮೂಲಕ ಅನಧಿಕೃತವಾಗಿ ರೈಲ್ವೆ ಬುಕ್ಕಿಂಗ್ ನಡೆಯುತ್ತಿತ್ತು. ಬಂಧಿತರಿಂದ 7.70 ಲಕ್ಷ ರೂ. ಮೌಲ್ಯದ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 27 ಐಆರ್ಸಿಟಿಎಲ್ ಐಡಿಗಳು ಪತ್ತೆಯಾಗಿವೆ.
ಹಲವು ವರ್ಷಗಳಿಂದ ಆರೋಪಿಗಳು ಅನಧಿಕೃತವಾಗಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದರು. ಅಲ್ಲದೆ ಪ್ರಯಾಣ ದರ ಪಡೆದು ಕಳೆದ ಎರಡು ವರ್ಷಗಳಿಂದ ವಂಚಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಬೆಂಗಳೂರು, ಕಂಟ್ಮೊನೆಂಟ್, ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಹತ್ತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.