ಕರ್ನಾಟಕ

karnataka

ETV Bharat / state

ಒಟಿಪಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತೆಗೆದು ಹಾಕಿ: ದೇಶಪಾಂಡೆ ಮನವಿ - MLA Deshpande appeal

ಸಿಎಂ, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಶಾಸಕ ಆರ್.ವಿ.ದೇಶಪಾಂಡೆ, ಬಿಪಿಎಲ್ ಕಾರ್ಡುದಾರರು ರೇಷನ್ ಪಡೆಯಲು ಇರುವ ಒಟಿಪಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತಗೆದು ಹಾಕಬೇಕೆಂದು ಒತ್ತಾಯಿಸಿದ್ದಾರೆ.

Temporary removal of OTP system: Deshpande appeal
ಶಾಸಕ ಆರ್.ವಿ.ದೇಶಪಾಂಡೆ

By

Published : May 7, 2020, 9:27 PM IST

ಬೆಂಗಳೂರು:ರಾಜ್ಯದಲ್ಲಿ ಬಿಪಿಎಲ್ ಕಾರ್ಡುದಾರರು ರೇಷನ್ ಪಡೆಯಲು ಇರುವ ಒಟಿಪಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತಗೆದು ಹಾಕಬೇಕೆಂದು ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ಶಾಸಕ ಆರ್.ವಿ.ದೇಶಪಾಂಡೆ ಮನವಿ

ಈ ಕುರಿತು ಸಿಎಂ, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ರೇಷನ್ ನೀಡುತ್ತಿದ್ದು, ಸದರಿ ರೇಷನ್ ಪಡೆಯಲು ಒಟಿಪಿ ಅಗತ್ಯವಾಗಿದೆ. ಆದರೆ ಗುಡ್ಡಗಾಡು ಪ್ರದೇಶ, ಮಲೆನಾಡು ಹಾಗೂ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮೊಬೈಲ್ ಸಂಪರ್ಕದ ವ್ಯಾಪ್ತಿಯಿಂದ ಹೊರಗಿರುವ ಕಾರಣ ಒಟಿಪಿ ಸಂದೇಶಗಳು ಕೆಲವೊಂದು ಸಾರಿ ತಲುಪುವುದಿಲ್ಲ. ಹೀಗಾಗಿ, ಫಲಾನುಭವಿಗಳು ರೇಷನ್ ಪಡೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಜನತೆ ತೀವ್ರ ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ಶಾಸಕ ಆರ್.ವಿ.ದೇಶಪಾಂಡೆ

ಈಗ ರೇಷನ್ ಪಡೆಯಲು ಒಟಿಪಿ ಸಮಸ್ಯೆ ಕಡ್ಡಾಯ ಮಾಡಿದರೆ ಅವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಹೀಗಾಗಿ ಇದೊಂದು ವಿಶೇಷ ಪ್ರಕರಣ ಎಂದು ಭಾವಿಸಿ ನೆಟ್​​​ವರ್ಕ್ ಸಮಸ್ಯೆ ಇರುವ ಕಡೆಗೆ ಮಾನ್ಯ ಜಿಲ್ಲಾಧಿಕಾರಿಗಳ ವಿವೇಚನಾ ಅಧಿಕಾರ ಬಳಸಿಕೊಂಡು ಒಟಿಪಿ ಬದಲಾಗಿ ಫಲಾನುಭವಿಗಳ ಸಹಿ ಪಡೆದು ರೇಷನ್ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ABOUT THE AUTHOR

...view details