ಕರ್ನಾಟಕ

karnataka

ETV Bharat / state

ಶಾಸಕ ಎನ್.​ಎ.ಹ್ಯಾರಿಸ್​ ಒತ್ತುವರಿ ಜಾಗ ತೆರವಿಗೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌ - ಎನ್​ಎ ಮೊಹಮ್ಮದ್ ಸೆಂಟರ್ ಫಾರ್ ಎಜುಕೇಶನ್

ಮುಂದಿನ ವಿಚಾರಣೆಯವರೆಗೆ ಕಾಂಗ್ರೆಸ್ ಶಾಸಕ ಎನ್.​ಎ.ಹ್ಯಾರಿಸ್​ ಒಡೆತನ ಒತ್ತುವರಿ ಜಾಗ ತೆರವು ಮಾಡದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

NA Mohammed Education Trust  break from High Court to encroachment land  Congress MLA NA Harris  ಎನ್​ಎ ಹ್ಯಾರಿಸ್​ ಒಡೆತನ ಒತ್ತುವರಿ ಜಾಗ  ಒತ್ತುವರಿ ಜಾಗ ತೆರವಿಗೆ ಹೈಕೋರ್ಟ್​ನಿಂದ ತಾತ್ಕಾಲಿಕ ವಿರಾಮ  ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್​ ಒತ್ತುವರಿ ಜಾಗ ತೆರವು ಮಾಡದಂತೆ ಹೈಕೋರ್ಟ್ ಆದೇಶ  ಎನ್​ಎ ಮೊಹಮ್ಮದ್ ಸೆಂಟರ್ ಫಾರ್ ಎಜುಕೇಶನ್  ನೋಟಿಸ್ ಜಾರಿ ಮಾಡದೇ ಒತ್ತುವರಿ ಆರೋಪ
ಹೈಕೋರ್ಟ್​ನಿಂದ ತಾತ್ಕಾಲಿಕ ವಿರಾಮ!

By

Published : Sep 16, 2022, 9:34 AM IST

ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.​ಎ.ಹ್ಯಾರಿಸ್​ ಒಡೆತನದ ಎನ್.​ಎ.ಮೊಹಮ್ಮದ್ ಸೆಂಟರ್ ಫಾರ್ ಎಜುಕೇಶನ್​ಗೆ ಸೇರಿದ ಒತ್ತುವರಿಯನ್ನು ಮುಂದಿನ ವಿಚಾರಣೆಯವರೆಗೂ ತೆರವು ಮಾಡದಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ. ರಾಜಕಾಲುವೆ ಒತ್ತುವರಿ ಆರೋಪದಲ್ಲಿ ತೆರವಿಗೆ ಮುಂದಾಗಿದ್ದ ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿ ಮೊಹಮ್ಮದ್ ಸೆಂಟರ್ ಫಾರ್ ಎಜುಕೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ಏಕಸದಸ್ಯ ಪೀಠ ಈ ಸೂಚನೆ ನೀಡಿತು. ಅಲ್ಲದೆ, ಪ್ರತಿವಾದಿಗಳಾದ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದ್ದು ವಿಚಾರಣೆ ಇಂದು ನಡೆಯಲಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ‘ಬೆಂಗಳೂರು ದಕ್ಷಿಣ ತಾಲ್ಲೂಕಿನ ವರ್ತೂರು ಹೋಬಳಿಯ ಛಲ್ಲಘಟ್ಟ ಗ್ರಾಮದಲ್ಲಿನ ಸರ್ವೆ ನಂ. 70 (14ಎ)ರಲ್ಲಿ ರಾಜಕಾಲುವೆ ಇದೆ ಎಂಬುದು 2015ರ ಮಾಸ್ಟರ್ ಪ್ಲಾನ್​ನಲ್ಲಿ ಉಲ್ಲೇಖವಾಗಿಲ್ಲ. ಅದಾಗ್ಯೂ, ಪ್ರತಿವಾದಿಯಾಗಿರುವ ಬಿಬಿಎಂಪಿಯು ನೋಟಿಸ್ ಜಾರಿ ಮಾಡದೇ ಒತ್ತುವರಿ ಆರೋಪದಲ್ಲಿ ತೆರವು ಮಾಡುತ್ತಿದೆ. ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗಿದೆ ಎಂದು ಪೀಠದ ಗಮನಸೆಳೆದಿದ್ದರು.

ವಿವಾದವೇನು?: ನಗರದಲ್ಲಿ ಮಳೆಯಿಂದ ಮನೆಗಳಿಗೆ ಮತ್ತು ರಸ್ತೆಯಲ್ಲಿ ನೀರು ನುಗ್ಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕಾಂಗ್ರೆಸ್​ನ ಹಿರಿಯ ಶಾಸಕ ಹ್ಯಾರಿಸ್​ ಅವರ ಪುತ್ರ ಮಹ್ಮದ್ ನಲಪಾಡ್​ ಅವರಿಗೆ ಸೇರಿದ್ದೆನ್ನಲಾದ ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಮಾಡಲು ಮುಂದಾದಾಗ ಸ್ಥಳದಲ್ಲಿ ವಾಗ್ವಾದ ನಡೆದಿರುವುದು ಗೊತ್ತಿರುವ ವಿಚಾರ. ಈ ಜಾಗದ ಒತ್ತುವರಿ ವಿಚಾರವಾಗಿ ಹೈಕೋರ್ಟ್​ ಬಿಬಿಎಂಪಿಗೆ ಸೂಚನೆ ನೀಡಿದೆ.

ಇದನ್ನೂ ಓದಿ:ಒತ್ತುವರಿ ತೆರವು ವೇಳೆ ನಲಪಾಡ್​ ವಾಗ್ವಾದ : ತೆರವು ತಡೆಯಲು ಯತ್ನ, ಬಗ್ಗದ ಪಾಲಿಕೆ ಅಧಿಕಾರಿಗಳು

ABOUT THE AUTHOR

...view details