ಬೆಂಗಳೂರು: ನಗರದ ಹೆಬ್ಬಾಳದ ಚೋಳನಾಯಕನಹಳ್ಳಿ ದೇವಸ್ಥಾನವೊಂದರಲ್ಲಿ ಖದೀಮರು ಹಣ ಇರುವ ಹುಂಡಿಯನ್ನೇ ದೋಚಿರುವ ಘಟನೆ ನಡೆದಿದೆ. ಚೋಳನಾಯನಕನಹಳ್ಳಿಯ ಶಂಭುಲಿಂಗೇಶ್ವರ ದೇವಾಲಯದ ಬಳಿ ನಿನ್ನೆ ತಡರಾತ್ರಿ 1:30ರ ಸುಮಾರಿಗೆ ಇಬ್ಬರು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ದೇವಸ್ಥಾನಕ್ಕೆ ನುಗ್ಗಿ ಹುಂಡಿ ದೋಚಿದ ಖದೀಮರು: ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ - ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಕಳೆದ ಒಂದು ವರ್ಷದಿಂದ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಕಳೆದ ರಾತ್ರಿ ದೇವಸ್ಥಾನದ ಹುಂಡಿ ದೋಚಿದ್ದಾರೆ.
ದೇವಸ್ಥಾನಕ್ಕೆ ನುಗ್ಗಿ ಹುಂಡಿ ದೋಚಿದ ಖದೀಮರು
ಕಳೆದ ಒಂದು ವರ್ಷದಿಂದ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ. ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಸಂಬಂಧ ಹೆಬ್ಬಾಳ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಬೆಳಗಾವಿ: ಕರ್ತವ್ಯ ಮುಗಿಸಿ ಕನ್ಯೆ ನೋಡಲು ಹೊರಟಿದ್ದ ಕಾನ್ಸ್ಟೇಬಲ್ ರಸ್ತೆ ಅಪಘಾತದಲ್ಲಿ ಸಾವು
Last Updated : Dec 8, 2021, 7:19 PM IST