ಬೆಂಗಳೂರು :ಬೇಸಿಗೆಗಾಲ ಆರಂಭವಾಗಿದೆ. ಜನರು ಸೂರ್ಯನ ತಾಪಮಾನದಿಂದಷ್ಟೇ ಅಲ್ಲದೇ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುವ ಅಗತ್ಯವಿದೆ. ಚಳಿಗಾಲದಲ್ಲಿ ಒಂದು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡಿದ್ರೆ, ಬೇಸಿಗೆಯಲ್ಲಿ ಬೇರೆ ರೀತಿಯದ್ದೇ ಅನಾರೋಗ್ಯ ತಲೆದೋರುತ್ತದೆ.
ಕಳೆದ ವರ್ಷಕ್ಕಿಂತ ಈ ವರ್ಷ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಮಾರ್ಚ್‌ನಿಂದ ಜೂನ್‌ವರೆಗೂ ಹೆಚ್ಚು ತಾಪಮಾನ ದಾಖಲಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಇನ್ನು ಈ ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯವಹಿಸಿದ್ರೆ ತೊಂದರೆ ತಪ್ಪಿದ್ದಲ್ಲ.
ಹಾಗಾದರೆ, ಬೇಸಿಗೆಯಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿ ಕೊಳ್ಳಬೇಕು? ಏನೆಲ್ಲ ಅನಾರೋಗ್ಯ ಸಮಸ್ಯೆಗಳು ಕಾಡುತ್ತೆ? ಆಹಾರ ಸೇವನೆ ಹೇಗೆ ಇರಬೇಕು? ಇವೆಲ್ಲದರ ಕುರಿತು ವೈದ್ಯರು ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ 3 ಮಾದರಿಯ ಕಾಯಿಲೆಗಳ ಕಾಣುತ್ತೆ. Heat Exhaustion, Heat Cramps, Heat Stroke ಬೇಸಿಗೆಯಲ್ಲಿ ಕಂಡು ಬರುವ ತೀವ್ರ ಕಾಯಿಲೆಗಳಿವು. Heat Exhaustion ನಿಂದಾಗಿ ದೇಹದಲ್ಲಿನ ನೀರಿನ ಅಂಶ ಕ್ಷೀಣಿಸುತ್ತೆ. ನೀರಿನ ಅಂಶ ಕಡಿಮೆ ಆದಾಗ ದೇಹದಲ್ಲಿ ಡಿಹೈಡ್ರೇಷನ್ ಉಂಟಾಗಿ ಸುಸ್ತಾಗುತ್ತೆ.
Heat Crampsನಿಂದಾಗಿ ದೇಹದ ಮಾಂಸಖಂಡಗಳು ಹಿಡಿದಂತಾಗಿ, ಹೊಟ್ಟೆಯ ಹಾಗೂ ಮಂಡಿಯ ಕೆಳಭಾಗದ ಕಾಲಿನಲ್ಲಿ ಹಿಡಿದಂತಾಗುತ್ತೆ. ಇನ್ನು ಈ Heat Exhaustion, Heat Cramps ಆದಾಗಲೂ ನಿರ್ಲಕ್ಷವಹಿಸಿದರೆ Heat Stroke ಆಗುವಂತ ಸಾಧ್ಯತೆ ಇರುತ್ತೆ. ಇದು ಮೂತ್ರಪಿಂಡ, ಹೃದಯ ಸಮಸ್ಯೆಗೆ ಕಾರಣವಾಗುತ್ತದೆ. ಇವೆಲ್ಲದರ ಜೊತೆಗೆ ಬೇದಿ ಆಗುವುದು, ಹಸಿವಾಗದೇ ಇರೋದು ಕೂಡ ಬೇಸಿಗೆಯಲ್ಲಿ ಕಾಣುವ ಕೆಲ ಸಾಮಾನ್ಯ ಲಕ್ಷಣಗಳು.
ಇದನ್ನೂ ಓದಿ:ಈ ಬಾರಿ ಉತ್ತಮ ಮಳೆ ನಿರೀಕ್ಷೆ: ರಾಜ್ಯದಲ್ಲಿ ರಸಗೊಬ್ಬರ ಬೇಡಿಕೆ,ದಾಸ್ತಾನು ಇಷ್ಟಿದೆ..
ಈ ಕುರಿತು ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಆಗಿರುವ ಡಾ. ಶ್ರೀ ವಿದ್ಯಾ ಮಾತಾನಾಡಿ, ಬೇಸಿಗೆ ಸಮಯದಲ್ಲಿ ಜನರು ಹೊರಗೆ ಓಡಾಡುವಾಗ ಅಥವಾ ಸ್ಪೋರ್ಟ್ ಆ್ಯಕ್ಟಿವಿಟಿಯಲ್ಲಿ ಇರುವವರು, ಹೊರಗೆ ಜಿಮ್ ಮಾಡುವವರು ಬಿಸಿಲಿಗೆ ಹೋಗದಂತೆ ಎಚ್ಚರಿಸಿದ್ದಾರೆ.
ಅದಷ್ಟು ಉಡುಪು ಧರಿಸುವಾಗ ಲೈಟ್ ಕಲರ್ಸ್ ಇರುವಂತಹದನ್ನ ಧರಿಸಬೇಕು,ಇವು ಬಿಸಿಲಿನ ಶಾಖದಿಂದ ಬಚಾವ್ ಮಾಡುತ್ತವೆ. ದೇಹವನ್ನ ಹೆಚ್ಚು ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕು. ಹೀಟ್ ಸ್ಟ್ರೋಕ್ ಸಂಭವಿಸಿದಾಗ ಸ್ವಯಂ ಚಿಕಿತ್ಸೆಗೆ ಒಳಪಡಿಸದೇ ವೈದ್ಯಕೀಯ ತುರ್ತು ಎಂದು ಭಾವಿಸಿ ಆಸ್ಪತ್ರೆಗೆ ದಾಖಲು ಆಗಬೇಕು. ಹೀಟ್ ಸ್ಟ್ರೋಕ್ನಲ್ಲಿ ತಲೆ ನೋವು, ತಲೆ ತಿರುಗುವುದು, ಗೊಂದಲವನ್ನುಂಟು ಮಾಡುವುದು ಆಗುತ್ತೆ. ಹೀಗಾಗಿ, ಹೆಚ್ಚು ಜಾಗ್ರತೆ ವಹಿಸಬೇಕು ಅಂತಾ ಸಲಹೆ ನೀಡಿದ್ದಾರೆ.
ಏನೆಲ್ಲ ಮಾಡಬೇಕು?