ಬೆಂಗಳೂರು: ಸರಳತೆ ಎನ್ನುವುದು ವೇಷಭೂಷಣ, ಶ್ರೀಮಂತಿಕೆಯಿಂದ ಬರುವುದಲ್ಲ. ನಮ್ಮ ಮಾತು, ನಡತೆ, ಗೌರವ, ಗುಣದಿಂದ ಬರುತ್ತದೆ ಎಂಬ ಮಾತಿದೆ. ಇದೀಗ ತೆಲುಗು ನಟ ಜೂ. ನಂದಮೂರಿ ತಾರಕ ರಾಮಾರಾವ್ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 'ಸರಳತೆ ಎಂದರೆ ಇದೇ' ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ನಿನ್ನೆ ಸಂಜೆ 'ಕರ್ನಾಟಕ ರಾಜ್ಯೋತ್ಸವ' ಸಂಭ್ರಮಾಚರಣೆಯಲ್ಲಿ ಜೂನಿಯರ್ ಎನ್‌ಟಿಆರ್ ಭಾಗವಹಿಸಿದ್ದು ಗೊತ್ತೇ ಇದೆ. ವಿಧಾನಸೌಧದ ಮುಂದೆ ಆಯೋಜಿಸಿದ್ದ ವೇದಿಕೆ ಸಮಾರಂಭದಲ್ಲಿ ಕುತೂಹಲಕಾರಿ ದೃಶ್ಯವೊಂದು ಕಂಡುಬಂತು.
ಇದನ್ನೂ ಓದಿ:ಯುದ್ಧ ಮಾಡದೇ ರಾಜ್ಯ ಗೆದ್ದಿರುವ ರಾಜ‘ಕುಮಾರ’: ಕನ್ನಡದಲ್ಲೇ ಜ್ಯೂ ಎನ್‌ಟಿಆರ್ ಬಣ್ಣನೆ
ಕಾರ್ಯಕ್ರಮದ ಮಳೆ ಸುರಿದಿದ್ದು ಸಭೆಯಲ್ಲಿ ಅತಿಥಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದ ಕುರ್ಚಿಗಳು ಒದ್ದೆಯಾಗಿದ್ದವು. ಜೂನಿಯರ್ ಎನ್‌ಟಿಆರ್ ಒಂದು ಕುರ್ಚಿಯನ್ನು ತಾವೇ ಬಟ್ಟೆಯಿಂದ ಒರೆಸಿ ಅದರ ಮುಂದೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರನ್ನು ಕೂರಿಸಿದರು. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಇನ್ನೊಂದು ಕುರ್ಚಿಯಲ್ಲಿ ಕೂರಿಸಲು ಹೇಳಿ ಮಹಿಳೆಯರ ಬಗ್ಗೆ ಗೌರವ ವ್ಯಕ್ತಪಡಿಸಿದರು. ಬಳಿಕ ಅವರು ಕುಳಿತುಕೊಳ್ಳಲಿದ್ದ ಕುರ್ಚಿಯನ್ನು ಶುಚಿಗೊಳಿಸಿ, ಆಸೀನರಾದರು. ನಟನ ಈ ನಡೆಯನ್ನು ನೋಡಿದ ನೆಟಿಜನ್, ಎನ್‌ಟಿಆರ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ.
ಇದನ್ನೂ ಓದಿ:ಅಪ್ಪು ಭಾವಚಿತ್ರಕ್ಕೆ ಕರ್ನಾಟಕ ರತ್ನ ಅರ್ಪಿಸಿದ ಕುಟುಂಬ... ವರ್ಷದ ಬಳಿಕ ಅಶ್ವಿನಿ ಮುಖದಲ್ಲಿ ನಗು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಜನಿಕಾಂತ್ ಮತ್ತು ಎನ್‌ಟಿಆರ್, ಪುನೀತ್ ಪತ್ನಿ ಅಶ್ವಿನಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಪುನೀತ್ ಬಗ್ಗೆ ಜೂ. ಎನ್ ಟಿಆರ್ ಮಾಡಿದ ಕನ್ನಡ ಭಾಷಣ ಗಮನ ಸೆಳೆಯಿತು.