ಕರ್ನಾಟಕ

karnataka

ETV Bharat / state

ಟೆಲಿಫೋನ್​​ ಕದ್ದಾಲಿಕೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಲು ಸಿಎಂ ಆದೇಶ - ಕೊಪ್ಪಳದಲ್ಲಿ ವಿದ್ಯುತ್ ಶಾಕ್‌

ಟೆಲಿಫೋನ್​​ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ಸಿಎಂ ಆದೇಶಿಸಿದ್ದಾರೆ. ಇನ್ನು ಕೊಪ್ಪಳದಲ್ಲಿ ವಿದ್ಯುತ್ ಶಾಕ್‌ನಿಂದ ಸಾವನಪ್ಪಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಸಿಎಂ

By

Published : Aug 18, 2019, 10:06 AM IST

ಬೆಂಗಳೂರು:ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.

ಟೆಲಿಫೋನ್ ಟ್ಯಾಪಿಂಗ್ ಸಮಗ್ರ ತನಿಖೆಗೆ ಸಿಎಲ್​ಪಿ ಲೀಡರ್ ಸೇರಿದಂತೆ ಎಲ್ಲರೂ ತನಿಖೆಗೆ ಒತ್ತಾಯಿಸಿದ್ದಾರೆ. ಹಾಗಾಗಿ ಸಿಬಿಐ ತನಿಖೆಗೆ ವಹಿಸೋಕೆ ಆದೇಶ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

‌ಇದೇ ವೇಳೆ ಕೊಪ್ಪಳದಲ್ಲಿ ವಿದ್ಯುತ್ ಶಾಕ್‌ನಿಂದ ವಿದ್ಯಾರ್ಥಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು. ನಾಳೆಯೇ ಪರಿಹಾರ ಮೊತ್ತ ನೀಡುವಂತೆ ಸೂಚನೆ ನೀಡಲಾಗುವುದು ಅಂತ ಸಿಎಂ ಯಡಿಯೂರಪ್ಪ ಧವಳಗಿರಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಮಂಗಳವಾರ ಪ್ರಮಾಣ ವಚನ:

ಮಂಗಳವಾರ ಮಧ್ಯಾಹ್ನ ಒಳ್ಳೆ ಮುಹೂರ್ತದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಅವತ್ತು ಯಾವುದೇ ಶಾಸಕಾಂಗ ಸಭೆ ಇಲ್ಲ. ನಾಲ್ಕು ದಿನ ಬಿಟ್ಟು ಶಾಸಕಾಂಗ ಪಕ್ಷದ ಸಭೆ ನಡೆಸ್ತೇವೆ ಅಂತ ಬಿಎಸ್‌ವೈ ತಿಳಿಸಿದರು.

ಇನ್ನು ಇದೇ ವೇಳೆ ಸಿಎಂ ನಿವಾಸಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿದರು. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಹೈ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಭದ್ರತೆ ಬಗ್ಗೆ ಸಿಎಂ ವಿವರಣೆ ಪಡೆದರು. ಮುಂಜಾಗ್ರತಾ ಕ್ರಮವಾಗಿ ಎಲ್ಲೆಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ಪಡೆದರು.

ABOUT THE AUTHOR

...view details