ಕರ್ನಾಟಕ

karnataka

ETV Bharat / state

ಬೆಂಗಳೂರು: ಅಪಾರ್ಟ್​​ಮೆಂಟ್​​ ಮೇಲಿಂದ ಹಾರಿ ಟೆಕ್ಕಿ ಆತ್ಮಹತ್ಯೆ - ಬೆಂಗಳೂರು ಸುದ್ದಿ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ ಹೆಗಡೆ(30) ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ‌ ನಗರದ ಬೆನ್ನಿಗಾನಹಳ್ಳಿ ಅಪಾರ್ಟ್​ಮೆಂಟ್​ವೊಂದರಲ್ಲಿ ನಡೆದಿದೆ‌.

Tekki lost his life by jumping from an apartment
ಅಪಾರ್ಟ್​​ಮೆಂಟ್​​ನಿಂದ ಹಾರಿ ಪ್ರಾಣ ಕಳೆದುಕೊಂಡ ಟೆಕ್ಕಿ

By

Published : May 21, 2020, 4:46 PM IST

ಬೆಂಗಳೂರು:ಕೌಟುಂಬಿಕ‌ ಕಾರಣಕ್ಕಾಗಿ ಮನನೊಂದು ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿ‌ ನಗರದ ಬೆನ್ನಿಗಾನಹಳ್ಳಿ ಅಪಾರ್ಟ್​ಮೆಂಟ್​ವೊಂದರಲ್ಲಿ ನಡೆದಿದೆ‌.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ ಹೆಗಡೆ(30) ಆತ್ಮಹತ್ಯೆ ಮಾಡಿಕೊಂಡವರು. ಮಗನ ವಿವಾಹ ಮಾಡಲು ಪೋಷಕರು ಮುಂದಾಗಿದ್ದರು. ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ‌ ಪೊಲೀಸರು ಕಂಡುಕೊಂಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಬೆನ್ನಿಗಾನಹಳ್ಳಿ ಕೆರೆಯ ಕಣ್ಣಳತೆ ದೂರದಲ್ಲಿರುವ ಅಪಾರ್ಟ್​ಮೆಂಟ್​ವೊಂದರಲ್ಲಿ ಉತ್ತಮ ಹೆಗಡೆ ಕುಟುಂಬ ವಾಸವಾಗಿತ್ತು. ನಿನ್ನೆ ಎಂದಿನಂತೆಯೇ ಪೋಷಕರ ಜೊತೆ ಊಟ ಮಾಡಿ ಮಲಗಿಕೊಂಡಿದ್ದಾನೆ. ಮತ್ತೆ ಏನಾಯಿತೋ ಗೊತ್ತಿಲ್ಲ‌. ಇಂದು ನಸುಕಿನ ಜಾವ ಸುಮಾರು 3 ಗಂಟೆ ವೇಳೆಗೆ ಅಪಾರ್ಟ್​ಮೆಂಟ್ ಮೇಲಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತದೇಹ ಕಂಡ ನೆರೆಮನೆಯವರು ಆತಂಕದಿಂದ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ರಾಮಮೂರ್ತಿ ನಗರ ಪೊಲೀಸರು ಸಿವಿ ರಾಮನ್ ನಗರ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details