ಬೆಂಗಳೂರು: ಇಂದು ಸಮಾರೋಪಗೊಂಡ 107ನೇ ವಿಜ್ಞಾನ ಕಾಂಗ್ರೆಸ್ನಲ್ಲಿ ಕೇಂದ್ರ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ವೆಂಕಯ್ಯ ನಾಯ್ಡು ಅವರ ಕುಟುಂಬದ ಜೊತೆಗೆ ಕಳೆದ ದಿನಗಳನ್ನು ಮೆಲುಕುಹಾಕಿದರು.
ತೇಜಸ್ವಿನಿ ಅನಂತಕುಮಾರ್ಗೆ ಸಾರು ಮಾಡಲು ಹೇಳಿಕೊಟ್ಟಿದ್ದು ವೆಂಕಯ್ಯ ನಾಯ್ಡು ಪತ್ನಿಯಂತೆ..! - ತೇಜಸ್ವಿನಿ ಅನಂತಕುಮಾರ್
ಕೇಂದ್ರ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ವೆಂಕಯ್ಯ ನಾಯ್ಡು ಅವರ ಕುಟುಂಬದ ಜೊತೆಗೆ ಕಳೆದ ದಿನಗಳನ್ನು ಮೆಲುಕುಹಾಕಿದರು.
![ತೇಜಸ್ವಿನಿ ಅನಂತಕುಮಾರ್ಗೆ ಸಾರು ಮಾಡಲು ಹೇಳಿಕೊಟ್ಟಿದ್ದು ವೆಂಕಯ್ಯ ನಾಯ್ಡು ಪತ್ನಿಯಂತೆ..! Tejaswini Ananthakumar](https://etvbharatimages.akamaized.net/etvbharat/prod-images/768-512-5630017-thumbnail-3x2-smk.jpg)
ತೇಜಸ್ವಿನಿ ಅನಂತಕುಮಾರ್
1996-97 ನೇ ಸಾಲಿನಲ್ಲಿ ದೆಹಲಿಯ ಸೌತ್ ಅವೆನ್ಯೂ ನಲ್ಲಿರುವ ಮನೆಯಲ್ಲಿ ಒಟ್ಟಿಗೆ ಇದ್ದಾಗ ದಕ್ಷಿಣ ಭಾರತ ಶೈಲಿಯ ಸಾಂಬಾರನ್ನು ಸರಿಯಾಗಿ ಮಾಡಲು ಕಲಿತಿದ್ದು ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ನಾಯ್ಡು ಅವರಿಂದ. ಅಂದು ಅವರಿಂದ ಕಲಿತ ಸಣ್ಣ ಪ್ರಮಾಣದ ಸಾಂಬಾರು ತಯಾರಿಕೆ ಇಂದು ಲಕ್ಷಾಂತರ ಮಕ್ಕಳಿಗೆ ಸಾಂಬಾರು ಮಾಡುವಲ್ಲಿ ಸಹಾಯ ಮಾಡಿದೆ ಎಂದು ನೆನಪು ಮಾಡಿಕೊಂಡರು.