ಕರ್ನಾಟಕ

karnataka

ETV Bharat / state

ನೆರೆ ಪ್ರವಾಹ: ಸಂತ್ರಸ್ತರ ನೆರವಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಹೆಚ್.ಕೆ. ಪಾಟೀಲ್ ತಂಡ - gadag flood news'

ಗದಗ ಜಿಲ್ಲೆಯ ಕೊಣ್ಣೂರು ಮತ್ತು ಹೊಳೆ ಆಲೂರು ಮಧ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಬ್ಲಾಂಕೆಟ್ ವಿತರಿಸಲು ಹೋಗಿದ್ದ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಹೆಚ್.ಕೆ. ಪಾಟೀಲ್ ಮತ್ತು ಮಾಜಿ ಸಂಸದ ಐ.ಜಿ. ಸನದಿ ಮತ್ತು ಇತರ ಪದಾಧಿಕಾರಿಗಳಿದ್ದ ತಂಡ ಪ್ರವಾಹದ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದೆ.

ಪ್ರವಾಹದ ಮಧ್ಯದಲ್ಲಿ ಸಿಲುಕಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ತಂಡ..!

By

Published : Aug 9, 2019, 5:54 PM IST

ಗದಗ:ಜಿಲ್ಲೆಯ ಕೊಣ್ಣೂರು ಮತ್ತು ಹೊಳೆ ಆಲೂರು ಮಧ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಬ್ಲಾಂಕೆಟ್ ವಿತರಿಸಲು ಹೋಗಿದ್ದ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಹೆಚ್.ಕೆ. ಪಾಟೀಲ್ ಮತ್ತು ಮಾಜಿ ಸಂಸದ ಐ.ಜಿ. ಸನದಿ ಮತ್ತು ಇತರ ಪದಾಧಿಕಾರಿಗಳಿದ್ದ ತಂಡ ಪ್ರವಾಹದ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಸಂತ್ರಸ್ತರಿಗೆ ಬ್ಲಾಂಕೆಟ್​ ವಿತರಿಸಲು ಹೋಗಿ ಪ್ರವಾಹಕ್ಕೆ ಸಿಲುಕಿದ್ದ ಹೆಚ್.ಕೆ. ಪಾಟೀಲ್ ತಂಡ

ಮಲಪ್ರಭಾ ನದಿ ಪ್ರವಾಹದಿಂದ ಪೀಡಿತವಾಗಿರುವ ವಾಸನ್, ಬೂದಿಹಾಳ, ಕೊಣ್ಣೂರು, ಹೊಳೆ-ಆಲೂರು ಗ್ರಾಮಗಳ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಹೋದ ಸಂದರ್ಭದಲ್ಲಿ ಹೆಚ್.ಕೆ. ಪಾಟೀಲ್ ಹಾಗೂ ಅಧಿಕಾರಿಗಳಿದ್ದ ವಾಹನ​ 4 ಅಡಿ ಮಟ್ಟದ ನೀರಿನಲ್ಲಿ ಸಿಲುಕಿತ್ತು. ಅವರು​ ಪ್ರವಾಹ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಮೂಲಕ ಕರೆ ಮಾಡಿ ಪರಿಸ್ಥಿತಿಯನ್ನು ವಿಚಾರಿಸಿದ್ರು. ಈ ವೇಳೆ ಹೆಚ್​.ಕೆ. ಪಾಟೀಲ್​ ಕೊಣ್ಣೂರು ಮತ್ತು ಹೊಳೆ ಆಲೂರು ಗ್ರಾಮಗಳು ಪೂರ್ಣವಾಗಿ ಮುಳುಗಡೆಯಾಗಿವೆ. ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೆರೆ ಪರಿಸ್ಥಿತಿ ಗಂಭೀರವಾಗಿದ್ದರೂ ಪರಿಹಾರ ಕಾರ್ಯ ಚುರುಕುಗೊಂಡಿಲ್ಲ ಎಂದು ಅಲ್ಲಿನ ಪರಿಸ್ಥಿತಿ ಬಗ್ಗೆ ಗಮನಕ್ಕೆ ತಂದರು.

ನಂತರ ಶಾಸಕ ಹೆಚ್.ಕೆ. ಪಾಟೀಲ್, ಮಾಜಿ ಸಂಸದ ಐ.ಜಿ. ಸನದಿ ಮತ್ತು ಇತರ ಪದಾಧಿಕಾರಿಗಳಿದ್ದ ತಂಡ ಗೂಡ್ಸ್​ ರೈಲಿನಲ್ಲಿ ಬಾಗಲಕೋಟೆಗೆ ತೆರಳಿದ್ರು.

ABOUT THE AUTHOR

...view details