ಬೆಂಗಳೂರು:ಶಾಲಾ ಶಿಕ್ಷಕರನೇಮಕಾತಿ ಆಯ್ಕೆ ಪ್ರಕ್ರಿಯೆ ಗೊಂದಲ ಸರಿಪಡಿಸುವಂತೆಮನವಿ ನೀಡಿ ಅಭ್ಯರ್ಥಿಗಳು ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿ ಬಳಿ ವಿನಂತಿಸಿಕೊಂಡರು. ವಿವಾಹವಾದ ಮಹಿಳಾ ಅಭ್ಯರ್ಥಿಗಳು ಗಂಡನ ಹೆಸರಿನೊಂದಿಗಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ ನೇಮಕಾತಿ ಅಧಿಸೂಚನೆಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ತಂದೆಯ ಜಾತಿ, ಆದಾಯ ಪ್ರಮಾಣ ಪತ್ರ ನೀಡಿರುವ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅಳಲು ತೋಡಿದರು.
ಪದವೀದರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರಕ್ಕೆ ಸಿಎಂ ಭೇಟಿಗೆ ಬಂದಿದ್ದೇವೆ. 15 ಸಾವಿರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಸರ್ಕಾರ ಹೊರಡಿಸಿತ್ತು. ಜಾತಿ ಪ್ರಮಾಣಪತ್ರ ಕೊಡಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖಿಸಿಲ್ಲ. 3000ಕ್ಕಿಂತ ಹೆಚ್ಚು ಮಹಿಳಾ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಸೆಲೆಕ್ಟ್ ಆಗಿದ್ದಾರೆ. ಮೊದಲ ಲಿಸ್ಟ್ ನಲ್ಲಿ ಸೆಲೆಕ್ಟ್ ಆಗಿದ್ದಾರೆ. ಗಂಡನ ಆದಾಯ ಪತ್ರ ಬೇಕು, ತಂದೆಯ ಆದಾಯ ಪತ್ರ ಆಗುವುದಿಲ್ಲ ಎಂದು ಆಯ್ಕೆ ಪಟ್ಟಿಯಿಂದ ಕೈ ಬಿಡಲಾಗಿದೆ. ಡಿಡಿಪಿ ಆಫೀಸ್‌ನಲ್ಲಿ ಮೆರಿಟ್ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡಿದ್ದಾರೆ. ಈಗ ಮದುವೆ ಆಗಿರುವ ಹೆಣ್ಣು ಮಕ್ಕಳು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.