ಬೆಂಗಳೂರು: ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಕಳೆದ ವರ್ಷದ ಶುಲ್ಕ ಕಟ್ಟದೇ ಬಾಕಿ ಇರಿಸಿಕೊಂಡಿದೆ.
ಖಾಸಗಿ ಅನುದಾನರಹಿತ ಶಾಲೆಗಳ ಮಂಡಳಿ ಹಾಗೂ ಕೆಲಸ ನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಸಿಬ್ಬಂದಿ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ರಾಜ್ಯಾದ್ಯಂತ ಅಧಿಕಾರಿಗಳ ಧೋರಣೆ, ಕಿರುಕುಳ-ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲು ರಾಜ್ಯ ಪಠ್ಯಕ್ರಮ ಶಾಲೆಗಳ ಶಿಕ್ಷಕರು ಸಜ್ಜಾಗಿದ್ದಾರೆ.
ಸರ್ಕಾರದಿಂದ ವೇತನ ಬಾಕಿ: ಪ್ರತಿಭಟನೆಗೆ ಸಜ್ಜಾದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆ ಶಿಕ್ಷಕರು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಆರ್ಟಿಇ ಮರುಪಾವತಿಗೆ ಈಗಾಗಲೇ ಸರ್ಕಾರ ಆದೇಶದಲ್ಲಿ ನೀಡಿದ್ದರೂ, ಇನ್ನೂ ಅನೇಕ ಡಿಡಿಪಿಐ ಕಚೇರಿಗಳಲ್ಲಿ ನೀಡಿದಂತಹ ಹಣ ವಿಲೇವಾರಿ ಮಾಡದೇ ಕರ್ತವ್ಯಲೋಪ ಎಸಗುತ್ತಿದ್ದಾರೆ. ಕೆಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಿಇಓ ಕಚೇರಿಗಳಲ್ಲಿ ದಬ್ಬಾಳಿಕೆ ನಡಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಡೀ ಶಿಕ್ಷಣ ಸಂಸ್ಥೆಗಳನ್ನು ಸಾಕಷ್ಟು ಕಷ್ಟಕ್ಕೆ ಸಿಲುಕಿದ್ದು, ಶಿಕ್ಷಕರು- ಶಿಕ್ಷಕೇತರ ಸಿಬ್ಬಂದಿಗಳಿಗೆ ಕನಿಷ್ಟ ಸಂಬಳವನ್ನು ನೀಡಲಾಗುತ್ತಿಲ್ಲ.. ಸರ್ಕಾರವೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪಠ್ಯಕ್ರಮ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿಗೆ ಬಂದಿದ್ದು, ಮುಂದೆ ದಾರಿ ಕಾಣದಾಗಿದೆ. ಹೀಗಾಗಿ ಕ್ಯಾಮ್ಸ್ (ಖಾಸಗಿ ಅನುದಾನ ರಹಿತ ಶಾಲೆ ರಾಜ್ಯ ಸಂಘಟನೆ) ಜೊತೆಗೆ ಇತರೆ ಸಂಘಟನೆಯೊಂದಿಗೆ ರಾಜ್ಯಾದ್ಯಂತ ಡಿಡಿಪಿಐ-ಬಿಇಓ ಕಚೇರಿಗಳ ಮುಂದೆ ಜುಲೈ ಎರಡನೇ ವಾರದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಅಂತ ಶಶಿಕುಮಾರ್ ತಿಳಿಸಿದ್ದಾರೆ.