ಬೆಂಗಳೂರು:2021-22ನೇ ಸಾಲಿನ ಅಂತರ್ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯ ಗಣಕೀಕೃತ ಕೌನ್ಸಲಿಂಗ್ ಪ್ರಕ್ರಿಯೆಯು ಇದೇ ಜನವರಿ 8 ರಂದು ನಡೆಯಬೇಕಿತ್ತು. ಆದರೆ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಈ ಪ್ರಕ್ರಿಯೆಯನ್ನು ದಿಢೀರ್ ಮುಂದೂಡಲಾಗಿದೆ.
ಪ್ರಸ್ತುತ ರಾಜ್ಯಾದ್ಯಂತ ಕೋವಿಡ್ ತೀವ್ರತೆ ಹಿನ್ನೆಲೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ, ಜನವರಿ 8 ರಂದು ನಡೆಯಬೇಕಾಗಿದ್ದ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಮುಂದೂಡಿರುವ ಪ್ರಕ್ರಿಯೆಯನ್ನ ಜನವರಿ 10 ರಂದು ಶಿಕ್ಷಕರ ಸದನದಲ್ಲಿ ನಡೆಸಲಾಗುತ್ತೆ.