ಕರ್ನಾಟಕ

karnataka

ETV Bharat / state

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ 23ರಿಂದ ಆರಂಭ - Board of Education

ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇದೇ ತಿಂಗಳಿನಿಂದ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ 23ರಿಂದ ಆರಂಭ

By

Published : Aug 21, 2019, 12:39 AM IST

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆಗಸ್ಟ್ 23ರಿಂದ ಮುಂದುವರಿಸಲಾಗುತ್ತಿದೆ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ 23ರಿಂದ ಆರಂಭ

ಈ ಹಿಂದೆ ಶಿಕ್ಷಕರ ವರ್ಗಾವಣೆಯನ್ನ ತಾತ್ಕಾಲಿಕವಾಗಿ ಆಗಸ್ಟ್ 13 ರಂದು ತಡೆಹಿಡಿಯಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದ ವರ್ಗಾವಣೆ ವೇಳಾಪಟ್ಟಿ ಮಾಹಿತಿಯನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಕೌನ್ಸಿಲಿಂಗ್​ನಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪ್ರತ್ಯೇಕವಾಗಿ ಸೂಚನೆಯನ್ನು ನೀಡಲಾಗುವುದಿಲ್ಲ. ಈ ಮಾಹಿತಿಯನ್ನು ಅಧಿಕೃತ ಎಂದು ಪರಿಗಣಿಸಿ ವೇಳಾಪಟ್ಟಿಯಂತೆ ಕೌನ್ಸಿಲಿಂಗ್​ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆ ಮತ್ತು ನೆರೆ ಕಾರಣಕ್ಕೆ ಈ ಹಿಂದೆ ಪ್ರಾಥಮಿಕ ಶಾಲಾ, ಮುಖ್ಯ ಶಿಕ್ಷಕರು, ಹಿರಿಯ ಮುಖ್ಯಶಿಕ್ಷಕರು ವಿಶೇಷ ಶಿಕ್ಷಕರ ವೃಂದದವರಿಗೆ ಘಟಕದೊಳಗಿನ ಕೋರಿಕೆ ವರ್ಗಾವಣೆಗಳಿಗೆ
23- 24 ರಂದುಕೌನ್ಸೆಲಿಂಗ್ ನಡೆಯಲಿದೆ.

ABOUT THE AUTHOR

...view details