ಬೆಂಗಳೂರು:ಶಿಕ್ಷಕರ ಪಾಲಿಗೆ ಕರಾಳ ಶಾಸನವಾಗಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ.
ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿ:ಸಚಿವರ ಮನೆ ಮುಂದೆ ಶಿಕ್ಷಕರ ಪ್ರತಿಭಟನೆ - teacherprotestnews
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಶಿಕ್ಷಕರು ಪ್ರತಿಭಟನೆ ನಡೆದಿದ್ದಾರೆ.
ಇಂದು ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಬಳಿ ನೂರಾರು ಶಿಕ್ಷಕರು ಜಮಾಯಿಸಿ, ತಮ್ಮ ಸಮಸ್ಯೆಯನ್ನು ಹೇಳಿಕೊಂಡ್ರು. ಕಡ್ಡಾಯ ವರ್ಗಾವಣೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಮುಂಬರುವ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ, ವೈಜ್ಞಾನಿಕ ವರ್ಗಾವಣೆ ನೀತಿಯನ್ನು ಜಾರಿ ಗೊಳಿಸಿ ಅಂತ ಮನವಿ ಮಾಡಿದರು. ವರ್ಗಾವಣೆಗೆ ಶಿಕ್ಷಕರ ವಿರೋಧವಿಲ್ಲ, ಆದರೆ ಒಂದು ವೈಜ್ಞಾನಿಕ ವರ್ಗಾವಣೆ ನೀತಿಯನ್ನು ಜಾರಿಗೊಳಿಸಬೇಕೆಂಬುದು ಶಿಕ್ಷಕರು ಮನವಿ ಮಾಡಿದರು.. ಕಡ್ಡಾಯ ವರ್ಗಾವಣೆ ಎಂಬುದು ಶಿಕ್ಷಕರ ವಿರೋಧಿ ನೀತಿಯಾಗಿದ್ದು, ಸಂವಿಧಾನ ಬಾಹಿರ ಕ್ರಮವಾಗಿದೆ ಎಂದ್ರು.
ವರ್ಗಾವಣೆ ವಿನಾಯಿತಿ ಪ್ರಕರಣಗಳು ಹಾಗೂ ಎ.ಬಿ.ಸಿ ವಲಯಗಳನ್ನು ಗುರುತಿಸುವುದರಲ್ಲಿ ಅವೈಜ್ಞಾನಿಕ ಅಂಶಗಳು ಸೇರ್ಪಡೆಯಾಗಿರುವುದರಿಂದ ಶಿಕ್ಷಕರಲ್ಲಿ ತಾರತಮ್ಯ ಎಸಗಲಾಗಿದೆ ಅಂತ ಆರೋಪಿಸಿದ್ರು. ಸರ್ಕರಿ ನೌಕರಿಯಲ್ಲಿರುವ ಪತಿ ಪತ್ನಿ ಪ್ರಕರಣಗಳಿಗೆ ವಿನಾಯಿತಿ ನೀಡಿ, ಸರ್ಕಾರಿ ನೌಕರರಲ್ಲದ ಪತಿ-ಪತ್ನಿ ಪ್ರಕರಣದ ಬಡ ವರ್ಗದ ಶಿಕ್ಷಕರನ್ನು ಮಾತ್ರ ದೂರದ ಸ್ಥಳಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಲ್ಲಿ ಶೇ.90 ರಷ್ಟು ಮಹಿಳಾ ಶಿಕ್ಷಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಅಂತ ಅಳಲು ತೊಡಿಕೊಂಡರು..ಇನ್ನು ಈ ಸಂಬಂಧ ಶಿಕ್ಷಕರ ಅಹವಾಲನ್ನು ಸಚಿವ ಸುರೇಶ್ ಕುಮಾರ್ ಸ್ವೀಕರಿಸಿದ್ದು, ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.