ಬೆಂಗಳೂರು: ಶಿಕ್ಷಕಿ ಲಕ್ಷ್ಮೀ, ವೈಟ್ ಫೀಲ್ಡ್ ಮುಖ್ಯ ರಸ್ತೆಯ ರಾಮಗೊಂಡಹಳ್ಳಿ ಗ್ರಾಮದ ನಿವಾಸಿಯಾಗಿದ್ದು,ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ತೆ ಮನೆಯವರ ದಿನನಿತ್ಯದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಇದೀಗ ಸಾವಿನ ಹಾದಿ ತುಳಿದಿದ್ದಾಳೆ. ವಿವಾಹ ಆದಾಗಿನಿಂದಲೂ ಪತಿ ಮುನಿರಾಜು ಮತ್ತು ಅತ್ತೆ ಶಾಂತಮ್ಮ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದು, ಇದೀಗ ಅವರೇ ನೇಣು ಬಿಗಿದು ನನ್ನ ಮಗಳನ್ನು ಕೊಂದಿದ್ದಾರೆಂದು ಮೃತ ಶಿಕ್ಷಕಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ನೂರಾರು ಮಕ್ಕಳ ಭವಿಷ್ಯ ರೂಪಿಸಿದ ಶಿಕ್ಷಕಿ ಜೀವನ ವರದಕ್ಷಿಣೆ ಕಿರುಕುಳಕ್ಕೆ ಬಲಿ!? - undefined
ಮಕ್ಕಳಿಗೆ ಪಾಠ ಮಾಡಿ ಅವರ ಭವಿಷ್ಯ ಉಜ್ವಲಗೊಳಿಸಬೇಕಾದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾಳೆಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಪತಿ ಮುನಿರಾಜು ಅವರ ಮನೆ ಮುಂದೆ ಜಮಾಯಿಸಿರುವ ಲಕ್ಷ್ಮೀ ಕುಟುಂಬಸ್ಥರು, ನಿತ್ಯ ವರದಕ್ಷಿಣೆ ಕಿರುಕುಳ ನೀಡಿ ಇದೀಗ ಜೀವ ತೆಗೆದಿದ್ದಾರೆ. ಇವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವರ್ತೂರು ಪೋಲೀಸರು ತನಿಖೆ ಕೈಗೊಂಡಿದ್ದು , ವಿಚಾರಣೆ ನಡೆಸುತ್ತಿದ್ದಾರೆ. ಲಕ್ಷ್ಮಿಯ ಮೃತದೇಹವನ್ನು ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಇತ ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನೂರಾರು ಮಕ್ಕಳ ಭವಿಷ್ಯ ಉಜ್ವಲ ಮಾಡಬೇಕಿದ್ದ ಶಿಕ್ಷಕಿಯ ಭವಿಷ್ಯ ವರದಕ್ಷಿಣೆಗೆ ಬಲಿಯಾಗಿದ್ದು ನಿಜಕ್ಕೂ ವಿಷಾದಕರವೇ ಸರಿ.