ಕರ್ನಾಟಕ

karnataka

ETV Bharat / state

ಟಿಡಿಆರ್ ಹಗರಣ ಪ್ರಕರಣ : ವಾಲ್ ಮಾರ್ಕ್ ಕಚೇರಿ ಮುಖ್ಯಸ್ಥ ಎಸಿಬಿ ತನಿಖೆಗೆ ಹಾಜರು - undefined

ಟಿಡಿಆರ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸಿಬಿ ನೀಡಿದ್ದ ನೋಟಿಸ್​ ಹಿನ್ನಲೆಯಲ್ಲಿ ವಾಲ್ ಮಾರ್ಕ್ ಕಚೇರಿ ಮುಖ್ಯಸ್ಥ ಎಸಿಬಿ ತನಿಖೆಗೆ ಹಾಜರಾಗಿದ್ದರು.

ರತ್ನನ್ ಲಾಥ್

By

Published : May 8, 2019, 6:18 PM IST

ಬೆಂಗಳೂರು: ವಾಲ್ ಮಾರ್ಕ್ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ರತನ್ ಲಾಥ್ ಹಾಗೂ ಗೌತಮ್ ಎಸಿಬಿ ಡಿವೈಎಸ್ಪಿ ರವಿಕುಮಾರ್ ಎದುರು ವಿಚಾರಣೆಗೆ ಹಾಜರಾಗಿದ್ದರು.

ಕಳೆದ ವಾರ ವಾಲ್ ಮಾರ್ಕ್ ಮುಖ್ಯಸ್ಥ ರತ್ನನ್ ಲಾಥ್ ಮನೆ,ಕಚೇರಿ ಹಾಗೂ ಕೆ.ಆರ್ ಪುರನ‌ಲ್ಲಿರುವ ಅವರ ಏಜೆಂಟ್ ಗೌತಮ್ ಮನೆಯ ಮೇಲೆ ಎಸಿಬಿ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದರು. ಇವರೆಲ್ಲ ಟಿಡಿಆರ್ ಹಗರಣದಲ್ಲಿ ಭಾಗಿಯಾಗಿದ್ದು, ಇದಕ್ಕೆಲ್ಲ ಸ್ಪಷ್ಟನೆ ನೀಡುವಂತೆ ಎಸಿಬಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವರು ವಿಚಾರಣೆಗೆ ಹಾಜರಾಗಿದ್ದರು.

ರತನ್ ಲಾಥ್ ವಾಲ್ ಮಾರ್ಕ್ ಕಂಪೆನಿಯ ಮಾಲೀಕರಾಗಿದ್ದಾರೆ.ಡಿಆರ್​ಸಿ ಸರ್ಟಿಫಿಕೇಟ್ ಹಿಡಿದು ಕೋಟಿ ಕೊಟಿ ಬಾಚಿದ್ದಾರೆ. ರಾಮಮೂರ್ತಿ ನಗರ ಫ್ಲೈಓವರ್​ನಿಂದ ಹಿಡಿದು ಟಿಸಿ ಪಾಳ್ಯದ ಸಿಗ್ನಲ್​ವರೆಗೆ ರಸ್ತೆ ಅಗಲೀಕರಣದ ಹೆಸರಲ್ಲಿ ಜಮೀನು ಕಬಳಿಸಿದ್ದಾರೆ. ಸದ್ಯ ಎಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದು, ತನಿಖೆ ಮುಂದುವರೆದಿದೆ.

For All Latest Updates

TAGGED:

ABOUT THE AUTHOR

...view details