ಕರ್ನಾಟಕ

karnataka

ETV Bharat / state

ಟಿಡಿಆರ್ ಹಗರಣ: ದಿನಕ್ಕೊಂದು ಮಾಹಿತಿ ಬಯಲು... ರತನ್​ಲಾಥ್​ ಕಬಳಿಸಿದ್ದು ಎಷ್ಟು ಸಾವಿರ ಕೋಟಿ? - undefined

ಟಿಡಿಆರ್ ಹಗರಣ ದಿನಕ್ಕೊಂದು ಮಾಹಿತಿ ಬಯಲು.. ದಾಳಿಗೊಳಗಾದ ಬಿಲ್ಡರ್ ರತನ್ ಲಾಥ್​ಗೆ ಎಸಿಬಿಯಿಂದ ಶೋಧ. ರತನ್ ಲಾಥ್ ವಾಲ್​ಮಾರ್ಕ್ ಕಂಪೆನಿಯ ಮಾಲೀಕನಾಗಿದ್ದು, ರಾಮಮೂರ್ತಿನಗರ ಫ್ಲೈಓವರ್​ನಿಂದ ಹಿಡಿದು ಟಿಸಿ ಪಾಳ್ಯದ ಸಿಗ್ನಲ್​ವರೆಗಿನ ರಸ್ತೆ ಅಗಲೀಕರಣದ ಹೆಸರಲ್ಲಿ ‌ 2000 ಕೋಟಿ ಗೋಲ್ಮಾಲ್ ಮಾಡಿದ್ದಾರೆ ಎನ್ನಲಾಗಿದೆ.

ಟಿಡಿಆರ್ ಹಗರಣ

By

Published : May 5, 2019, 9:08 PM IST

ಬೆಂಗಳೂರು:ಟಿಡಿಆರ್ ಹಗರಣ ದಿನಕ್ಕೊಂದು ಮಾಹಿತಿ ಹೊರಬೀಳ್ತಿದೆ‌‌. ಎಸಿಬಿ ದಾಳಿಗೊಳಗಾದ ಬಿಲ್ಡರ್ ರತನ್​ಲಾಥ್​ನ ಕರ್ಮಕಾಂಡ ಇದೀಗ ಎಸಿಬಿ ತನಿಖೆಯಿಂದ ಬಯಲಾಗಿದೆ.

ಯಾವೆಲ್ಲಾ ಗೋಲ್ಮಾಲ್:

ರತನ್ ಲಾಥ್ ವಾಲ್​ಮಾರ್ಕ್ ಕಂಪೆನಿಯ ಮಾಲೀಕನಾಗಿದ್ದು, ರಾಮಮೂರ್ತಿನಗರ ಫ್ಲೈಓವರ್​ನಿಂದ ಹಿಡಿದು ಟಿಸಿ ಪಾಳ್ಯದ ಸಿಗ್ನಲ್​ವರೆಗಿನ ರಸ್ತೆ ಅಗಲೀಕರಣದ ಹೆಸರಲ್ಲಿ ‌ 2000 ಕೋಟಿ ಗೋಲ್ಮಾಲ್ ಮಾಡಿದ್ದಾನೆ ಎನ್ನಲಾಗಿದೆ.

ಹಾಗೆ ಫರ್ವೇಜ್ ಎಂಬವರ 1500 ಸ್ಕ್ವಾರ್ ಫೀಟ್ ಜಾಗವನ್ನ ಕಬಳಿಸಿದ್ದಾನೆ.‌‌ 2002 ರಲ್ಲಿ ರಾಮಮೂರ್ತಿನಗರದ ಬಳಿ‌ ರೇವಣ್ಣ ಎಂಬುವವರು ತಮ್ಮ ಜಾಗವನ್ನ ಫರ್ವೇಜ್​ಗೆ ಸೇಲ್ ಮಾಡಿದ್ದ. ಆದ್ರೆ ಫರ್ವೇಜ್ ಜಾಗದ ದಾಖಲೆಗಳನ್ನ ತನ್ನ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ. ಈ ಜಾಗದ ಮೇಲೆ ಕಣ್ಣು ಹಾಕಿದ್ದ ಬಿಲ್ಡರ್ ರತನ್ 2009ರಲ್ಲಿ ಜಾಗದ ಹಳೇ ಮಾಲೀಕ ರೇವಣ್ಣ ಸಾವನ್ನಪ್ಪಿದ್ದ ವಿಚಾರ ತಿಳಿದು ‌ರೇವಣ್ಣನ ಮಕ್ಕಳನ್ನ ಹಿಡಿದು ಡಿಆರ್​ಸಿ ಸರ್ಟಿಫಿಕೇಟ್ ಮಾಡಿಸಿ ತನ್ನ ಹೆಸರಿಗೆ ಮಾಡಿಕೊಂಡು‌ ರೇವಣ್ಣನ ಮಕ್ಕಳಿಗೆ ೪೦ ಲಕ್ಷ ರೂಪಾಯಿ ಹಣ ಕೊಟ್ಟು ಬಾಯಿಮುಚ್ಚಿಸಿದ್ದ ಎನ್ನಲಾಗಿದೆ.

ನಂತರ 1500 ಅಡಿ ಜಾಗವನ್ನ ಪಾಲಿಕೆಯ ಅಧಿಕಾರಿಗಳ ಜೊತೆ ಸೇರಿ 15 ಸಾವಿರ ಅಡಿ ಎಂದು ಡಿಆರ್​ಸಿ ಸರ್ಟಿಫಿಕೇಟ್ ರೆಡಿಮಾಡಿಸಿದ್ದ (ಡಿಆರ್​ಸಿ ಅಂದ್ರೆ ಡೆವಲಪ್ಮೆಂಟ್ ರೈಟ್ಸ್ ಸರ್ಟಿಫಿಕೇಟ್) ಆ ಜಾಗವನ್ನ ಫಿನಿಕ್ಸ್ ಮಾಲ್​ನ ಮಾಲೀಕರಿಗೆ ಸೇಲ್ ಮಾಡಿದ್ದ. ಆದ್ರೆ 2009ರ ಆಗಿನ ಪಾಲಿಕೆಯ ಕಮೀಷನರ್ ಡಿಆರ್​ಸಿ ಸಹಿಯಿಂದಲೇ ಅಕ್ರಮ ನಡೆದಿದೆ ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ. ನಿನ್ನೆ ನಡೆದ ರೈಡ್​ನಲ್ಲಿ ರತನ್ ಲಾಥ್ ತಲೆಮರೆಸಿಕೊಂಡಿದ್ದಾನೆ.

ಹಾಗೆ ನಿನ್ನೆ ದಾಳಿ ಮಾಡಿದಾಗ‌ ರತನ್ ಮನೆಯಲ್ಲಿದ್ದ ಕಂಪ್ಯೂಟರ್ ಪರಿಶೀಲನೆ ಮಾಡಿದಾಗ ರತನ್ ಎಲ್ಲಾ ಫೈಲನ್ನು ಡಿಲಿಟ್ ಮಾಡಿರುವ ವಿಚಾರ ತಿಳಿದು ಬಂದಿದೆ. ಎಸಿಬಿ ರತನ್ ಮನೆಯಲ್ಲಿ ಸಿಕ್ಕ ಕಂಪ್ಯೂಟರ್​ನ ದಾಖಲೆಗಳನ್ನ ರಿಕವರಿ ಮಾಡಿ ತನಿಖೆ‌ ಮುಂದುವರೆಸಿದ್ದಾರೆ.‌ ಈ ಟಿಡಿ‌ಆರ್ ಹಗರಣ ದಿನಕ್ಕೊಂದು ರೋಚಕ ಕಹಾನಿ ಹಾಗೆ ಹಲವಾರು ಭ್ರಷ್ಟ ಕುಲಗಳು ಇರುವುದನ್ನು ನೋಡಿದ ಎಸಿಬಿ ಅಧಿಕಾರಿಗಳೆ ಬೆಚ್ಚಿಬಿದ್ದಿದ್ದು . ಇನಷ್ಟು ಭ್ರಷ್ಟ ಅಧಿಕಾರಿಗಳನ್ನ ಖೆಡ್ಡಾಕ್ಕೆ ಕೆಡವಲು ಎಸಿಬಿ ತಯಾರಿಯಾಗಿ ನಿಂತಿದೆ.

For All Latest Updates

TAGGED:

ABOUT THE AUTHOR

...view details