ಕರ್ನಾಟಕ

karnataka

ETV Bharat / state

ಟಿಡಿಆರ್ ಹಗರಣ: ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, ದಾಖಲೆಗಳು ಜಪ್ತಿ - ಬೆಂಗಳೂರು, ಟಿಡಿಆರ್ ಹಗರಣ, ಬೋಗಸ್ ದಾಖೆಲೆ ಸೃಷ್ಟಿ, ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, ಮಹತ್ವದ  ದಾಖಲೆಗಳ ಜಪ್ತಿ, ಕನ್ನಡ ವಾರ್ತೆ, ಈಟಿವಿ ಭಾರತ

ರಸ್ತೆ ಅಗಲೀಕರಣಕ್ಕೆಂದು ಸ್ವಾಧೀನಪಡಿಸಿಕೊಳ್ಳಲಾದ ಜಾಗಗಳಿಗೆ ಬೋಗಸ್ ಟಿಡಿಆರ್ ಸೃಷ್ಟಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಲು ಖಾಸಗಿ ವ್ಯಕ್ತಿಗಳಿಗೆ ಸಹಕರಿಸುತ್ತಿದ್ದ ಆರೋಪದಡಿ ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ತಂಡ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಟಿಡಿಆರ್ ಹಗರಣ: ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಮಹತ್ವದ ದಾಖಲೆಗಳ ಜಪ್ತಿ

By

Published : Aug 2, 2019, 3:43 AM IST

ಬೆಂಗಳೂರು: ಅಭಿವೃದ್ಧಿ ವರ್ಗಾವಣೆ ಹಕ್ಕು (ಟಿಡಿಆರ್​) ಹಗರಣದಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ ಎಂಬ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಿಬಿಎಂಪಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

ನಗರದ ಚೋಳರಪಾಳ್ಯ ವಾರ್ಡ್​​ನ ಕಾರ್ಯಪಾಲಕ ನಾಗರಾಜು, ಹೊರಮಾವು ಉಪವಲಯದ ಎಆರ್​ಐಒ ಎಸ್​.ನಂದನ, ಕಲ್ಯಾಣ ನಗರದ ಬಿಬಿಎಂಪಿ ಅಧಿಕಾರಿ ಎಂ.ಕೆ. ರೋಚನ್​ ಮನೆ, ಹೊರಮಾವಿನಲ್ಲಿರುವ ಗುಡ್​ ಹೋಂ ವೆಂಚರ್ಸ್​ ಕಚೇರಿ, ವಿ. ಗಜೇಂದ್ರ, ಕಲ್ಕೆರೆ ಮುಖ್ಯರಸ್ತೆಯ ಜಿ.ವಿ. ಕನ್​ಸ್ಟ್ರಕ್ಷನ್​, ಸರ್ಜಾಪುರ ರಸ್ತೆಯ ಗೋಪಿ ಎಂಬುವರ ಮನೆ ಹಾಗೂ ಅಕ್ಷಯ ನಗರದ ಆನೆಮ್ಮ ಎಂಬುವರ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.

ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ನಿವೇಶನಗಳು ಹಾಗೂ ಕಟ್ಟಡಗಳನ್ನು ಹೆಚ್ಚು ಬೆಲೆ ನಿಗದಿ ಮಾಡಿಕೊಡುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಕೋಟ್ಯಂತರ ರೂ. ಲಾಭ ಮಾಡಿಕೊಡಲು ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲು ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​ ಪೂರ್ವಾನುಮತಿ ಪಡೆದು ಎಸಿಬಿ ಪ್ರಕರಣ ದಾಖಲಿಸಿತ್ತು. ಇದೀಗ ನ್ಯಾಯಾಲಯದ ಅನುಮತಿ ಪಡೆದು ದಾಳಿ ನಡೆಸಿದೆ.

ಹೊರಮಾವಿನ ಟಿಸಿ ಪಾಳ್ಯ ಮುಖ್ಯರಸ್ತೆ ಹಾಗೂ ವಾರಣಾಸಿ ರಸ್ತೆ ಅಗಲೀಕರಣಕ್ಕೆ ಸರ್ವೆ ನಂ7ರ ಜಮೀನಿನಲ್ಲಿ ಅಂದಾಜು 6,886 ಚದರ್​ ಅಡಿ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಅಧಿಕಾರಿಗಳು ಅಕ್ರಮವಾಗಿ ಸುಮಾರು 1,57,961 ಚದರ್​ ಅಡಿ ಬೋಗಸ್​ ಟಿಡಿಆರ್ ಸೃಷ್ಟಿಸಿ ಅನ್ಯ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರು.

For All Latest Updates

TAGGED:

ABOUT THE AUTHOR

...view details