ಬೆಂಗಳೂರು:ಟಿಡಿಆರ್ ಅವ್ಯವಹಾರ ಪ್ರಕರಣದ ಆರೋಪಿ ಬಿಡಿಎ ಎಇಇ ಕೃಷ್ಣಲಾಲ್‌ಗೆ ಕೋರ್ಟ್ ಮಧ್ಯಂತರ ಜಾಮೀನು ರದ್ದುಪಡಿಸುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.
ಟಿಡಿಆರ್ ಹಗರಣ: ಆರೋಪಿ ಕೃಷ್ಣಲಾಲ್ ನಾಪತ್ತೆ - undefined
ಟಿಡಿಆರ್ ಅವ್ಯವಹಾರ ಪ್ರಕರಣದ ಆರೋಪಿ ಬಿಡಿಎ ಎಇಇ ಕೃಷ್ಣಲಾಲ್‌ಗೆ ಕೋರ್ಟ್ ಮಧ್ಯಂತರ ಜಾಮೀನು ರದ್ದುಪಡಿಸುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಲೋಕಾಯುಕ್ತ ಕೋರ್ಟ್ ಷರತ್ತು ಉಲ್ಲಂಘನೆ ಮಾಡಿದ್ದರಿಂದ ಮಧ್ಯಂತರ ಜಾಮೀನು ರದ್ದು ಮಾಡಿತ್ತು. ಎಸಿಬಿ ಅಧಿಕಾರಿಗಳು ಕೂಡ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಕೃಷ್ಣಲಾಲ್‌ಗಾಗಿ ಎಸಿಬಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಆತನ ಹುಟ್ಟೂರಾದ ಹರಪನಹಳ್ಳಿಯಲ್ಲಿ ತಲಾಶ್ ನಡೆಸುತ್ತಿದ್ದಾರೆ. ಹಾಗೇ ಎಸಿಬಿ ಅಧಿಕಾರಿಗಳು ಕೃಷ್ಣಲಾಲ್ ಮನೆ, ಸಂಬಂಧಿಕರ ಮನೆ, ನಗರದ ಲಾಡ್ಜ್ಗಳಲ್ಲೂ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಆದರೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಈಗ ಮಧ್ಯಂತರ ಜಾಮೀನು ರದ್ದುಗೊಂಡ ಹಿನ್ನೆಲೆ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಲು ಪ್ರಯತ್ನಿಸುತ್ತಿದ್ದಾನೆ ಎನ್ನಲಾಗುತ್ತಿದೆ.