ಬೆಂಗಳೂರು:ಕೊರೊನಾ ವೈರಸ್ ಸಿಲಿಕಾನ್ ಸಿಟಿಗೆ ಭಯ ಹುಟ್ಟಿಸಿದ್ದೇ ತಡ ನಗರದಲ್ಲಿ ಮಾಸ್ಕ್ಗಳ ಅಕ್ರಮ ಮಾರಾಟ ದಂಧೆ ಆರಂಭವಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಅಧಿಕ ಮೊತ್ತಕ್ಕೆ ಮಾಸ್ಕ್ ಮಾರಾಟ: ಬಿಸಿ ಮುಟ್ಟಿಸಿದ ವಾಣಿಜ್ಯ ತೆರಿಗೆ ಇಲಾಖೆ - ಅಧಿಕ ಮೊತ್ತಕ್ಕೆ ಫೇಸ್ ಮಾಸ್ಕ್ ಮಾರಾಟ
ಜನರಲ್ಲಿ ಭಯ ಉಂಟು ಮಾಡಿರುವ ಕೊರೊನಾ ವೈರಸ್, ಸಿಲಿಕಾನ್ ಸಿಟಿಯಲ್ಲಿಯೂ ಭೀತಿ ತಂದ ಹಿನ್ನೆಲೆ ಬಿಲ್ ನೀಡದೇ ಮಾಸ್ಕ್ಗಳ ಅಕ್ರಮ ದಂಧೆ ನಡೆಸುತ್ತಿದ್ದ ಅಂಗಡಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಾಸ್ಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
Tax officials raided
ಬಿಲ್ ನೀಡದೇ ಅಧಿಕ ಮೊತ್ತಕ್ಕೆ ಮಾಸ್ಕ್ಗಳ ಮಾರಾಟ ಮಾಡುತ್ತಿದ್ದವರಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಇಂದು ಇಲಾಖೆಯ ಅಪರ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಏಕಕಾಲದಲ್ಲಿ ಸುಮಾರು 50 ಜನ ಅಧಿಕಾರಿಗಳು ಮತ್ತು ನಗರದ ಹಲವು ಮೆಡಿಕಲ್ ಶಾಪ್ಗಳ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಕೆಲ ನಕಲಿ ಮಾಸ್ಕ್ಗಳು ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ. ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.