ಕರ್ನಾಟಕ

karnataka

ETV Bharat / state

'ತಾರಿಣಿ' ಮೂಲಕ ಮತ್ತೆ ಕನ್ನಡದಲ್ಲಿ ಮಮತಾ ರಾಹುತ್; ಸ್ಯಾಂಡಲ್​ವುಡ್​ಗೆ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ - ನಟಿ ಮಮತ ರಾಹುತ್ ಗರ್ಭಿಣಿ

ಪೂರ್ಣಚಂದ್ರ ನಿರ್ದೇಶನದ "ತಾರಿಣಿ" ಚಿತ್ರ ನಿರ್ಮಾಣಗೊಳ್ಳುತ್ತಿದ್ದು ನಟಿ ಮಮತಾ ರಾಹುತ್ ಗರ್ಭಿಣಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

tarini
ತಾರಿಣಿ ಚಿತ್ರ ತಂಡ

By

Published : Apr 17, 2023, 1:54 PM IST

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಬೋಲ್ಡ್ ನಟನೆಯಿಂದಲೇ ಗಮನ ಸೆಳೆದಿರೋ ನಟಿ ಮಮತಾ ರಾಹುತ್. ಬಹಳ ದಿನಗಳ ಬಳಿಕ‌ ಮಮತ ರಾಹುತ್ ಗರ್ಭಿಣಿ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾರಿಣಿ ಎಂಬ ಸಿನಿಮಾ ಮಾಡುತ್ತಿದ್ದಾರೆ. ಸಿದ್ದು ಪೂರ್ಣಚಂದ್ರ ನಿರ್ದೇಶನದ "ತಾರಿಣಿ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನೆರವೇರಿತು.

ತಾರಿಣಿ ಚಿತ್ರ ತಂಡ

ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಗಂಡಸಿ ಸದಾನಂದಸ್ವಾಮಿ ಆರಂಭಫಲಕ ತೋರಿದರು. ನಟ ಪ್ರಣಯಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರದಲ್ಲಿ ತಾರಿಣಿಯಾಗಿ ಮಮತಾ ರಾಹುತ್ ನಟಿಸುತ್ತಿದ್ದು, ನಾಯಕನಾಗಿ ರೋಹಿತ್ ಅಭಿನಯಿಸುತ್ತಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ. ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ಕುಮಾರ ಬೇಂದ್ರೆ, ತೇಜಸ್ವಿನಿ, ರಾಜು ಕಲ್ಕುಣಿ, ಶ್ರೀಸಾಯಿ ಮಂಜು, ಸುಚಿತ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ತಾರಿಣಿ ಚಿತ್ರ ತಂಡ

"ತಾರಿಣಿ" ಮಹಿಳಾ ಪ್ರಧಾನ ಚಿತ್ರವಾಗಿದೆ. ಹಲವು ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಖ್ಯಾತಿ ಗಳಿಸಿದ್ದ "ದಾರಿ ಯಾವುದಯ್ಯ ವೈಕುಂಠಕೆ" ಚಿತ್ರ ಸೇರಿದಂತೆ ಅನೇಕ ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ "ತಾರಿಣಿ" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ದೀಪಕ್ ಸಿ.ಎಸ್ ಸಂಕಲನ, ಬಸವರಾಜ್ ಆಚಾರ್ಯ ಕಲಾ ನಿರ್ದೇಶನ, ನಾಗರತ್ನ ಕೆ.ಹೆಚ್ ವಸ್ತ್ರಾಲಂಕಾರ ಹಾಗೂ ಎಸ್ ರಘುನಾಥ್ ರಾವ್ ಅವರ ಸ್ಥಿರಚಿತ್ರಣ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

'ರಾಧೆ'ಯಾಗಲಿರುವ ಮಯೂರಿ ನಟರಾಜ್​: ಇತ್ತೀಚೆಗಷ್ಟೇ ಬಿಡುಗಡೆಗೊಂಡ ಧನಂಜಯ್ ಅಭಿನಯದ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ‘ಭೂಮಿ’ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು ಮಯೂರಿ ನಟರಾಜ್. ಇದೀಗ ಪರಂವಾ ಸ್ಟುಡಿಯೋಸ್​ನ ಅಡಿ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಯುವ ನಟಿಯಾಗಿರುವ ಮಯೂರಿ ನಟರಾಜ್​ ಎರಡನೇ ಹಿರೋಯಿನ್​ ಆಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ರಾಧೆ ಎಂಬ ಪಾತ್ರದಲ್ಲಿ ಮಿಂಚಲಿದ್ಧಾರೆ.

ಹೊಸಬರ 'ರಂಗು ರಗಳೆ': ನಿರ್ದೇಶಕ ಜಾಕ್ ರಂಗು ರಗಳೆ ಎಂಬ ಹೊಸ ರೀತಿಯ ಕಥಾ ಹಂದರ ಮೂವಿಯನ್ನು ನಿರ್ದೆಶಿಸುತ್ತಿದ್ದಾರೆ. ಈ ಮೂವಿಯ ಮುಹೂರ್ತ ಕಾರ್ಯಕ್ರಮವು ಬೆಂಗಳೂರಿನ ಪಂಚಮುಖಿ ಗಣಪತಿ ದೇಗುಲದಲ್ಲಿ ನೆರೆವೇರಿದೆ. ಇನ್ನು ಇದರ ನಿರ್ದೆಶಕ ಜಾಕ್ ಈ ಮೂವಿಗೆ ಆಕ್ಷನ್​ ಕಟ್​ ಹೇಳುವ ಮೂಲಕ ಸ್ವತಂತ್ರ​ ನಿರ್ದೆಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರವು ರೋಮ್ಯಾಂಟಿಕ್​ ಕಾಮಿಡಿಯನ್ನು ಒಳಗೊಂಡಿದ್ದು, ಈ ಮೂವಿಯಲ್ಲಿ ಗಟ್ಟಿಮೇಳ ಧಾರಾವಾಹಿಯ ಖ್ಯಾತಿಯ ಅಭಿಧಾಸ್​ ಮತ್ತು ಸುಘೋಷ್​, ಲವ್​ ಮಾಕ್ಟೇಲ್​ ಖ್ಯಾತಿಯ ಅಭಿಲಾಷ್​ ದಳಪತಿ ಮುಖ್ಯ ಭೂಮಿಕೆಯಲ್ಲಿ ಅಭಿನಯಸಲಿದ್ದಾರೆ.

ಇದನ್ನು ಓದಿ:‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ನಟಿ ಮಯೂರಿ ನಟರಾಜ್

ABOUT THE AUTHOR

...view details