ಬೆಂಗಳೂರು:ಮಧ್ಯರಾತ್ರಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಮಧ್ಯರಾತ್ರಿ ಒಂಟಿಯಾಗಿ ಓಡಾಡುವವರೇ ಇವರಿಗೆ ಟಾರ್ಗೆಟ್.. ಕೊನೆಗೂ ಖಾಕಿ ಕೈಗೆ ಸಿಕ್ಕುಬಿಟ್ಟರು.. - ಆರ್.ಟಿ.ನಗರ ಪೊಲೀಸ್ ಠಾಣೆ
ಮಧ್ಯರಾತ್ರಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಮಧ್ಯರಾತ್ರಿ ಒಂಟಿಯಾಗಿ ಓಡಾಡುವವರನ್ನೆ ಟಾರ್ಗೆಟ್ ಮಾಡಿ ಸುಲಿಗೆ..ಮೂವರ ಬಂಧನ
ಮೊಹ್ಮದ್ ಸಲಾಹ, ಮೆಹಬೂಬ್ ಶೇಖ್, ಶೇಖ್ ಸಲ್ಮಾನ್ ಬಂಧಿತರು. ಉಬರ್ ಈಟ್ಸ್ ಕಂಪೆನಿಯ ಫುಡ್ ಡೆಲಿವರಿ ಬಾಯ್ ಸಚಿನ್, ಹೊಂಡಾ ಆ್ಯಕ್ಟೀವಾ ಗಾಡಿಯಲ್ಲಿ ಆರ್‌ಟಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹೋಗುತ್ತಿದ್ದ ವೇಳೆ, ಮೂವರು ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿ ಮೊಬೈಲ್ ಹಾಗೂ ಪರ್ಸ್ನ ಕಿತ್ತುಕೊಂಡು ಹೋಗಿದ್ದರು.
ಈ ಬಗ್ಗೆ ಸಚಿನ್ ಆರ್‌ಟಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಆರ್‌ಟಿನಗರ ಪೊಲೀಸರು, ಮೂವರು ಆರೋಪಿಗಳನ್ನ ಬಂಧಿಸಿ, ಅವರಿಂದ 1ಲಕ್ಷ ರೂ. ಬೆಲೆಬಾಳುವ ವಿವಿಧ ಕಂಪನಿಯ 2 ಮೊಬೈಲ್, 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.